×
Ad

ಇನ್ನೂ ಯಾವುದೇ ಸುಳಿವಿಲ್ಲ: ಸರಕಾರ

Update: 2017-09-30 20:06 IST

 ಹರಿದ್ವಾರ್, ಸೆ.30: ಸುಮಾರು 15 ದಿನದ ಹಿಂದೆ ನಾಪತ್ತೆಯಾಗಿದ್ದ ಸಂತ ಮಹಾಂತ ಮೋಹನದಾಸ್ ಬಗ್ಗೆ ಇನ್ನೂ ಯಾವುದೇ ಸುಳಿವು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದು , ಅಕ್ಟೋಬರ್ 2ರ ಒಳಗೆ ಮಹಾಂತ ಮೋಹನದಾಸ್‌ರನ್ನು ಪತ್ತೆಹಚ್ಚದಿದ್ದಲ್ಲಿ ಹರಿದ್ವಾರ, ಅಯೋಧ್ಯೆ ಮತ್ತು ಅಲಹಾಬಾದ್‌ನಲ್ಲಿ ಪ್ರತಿಭಟನೆ ಆರಂಭಿಸುವುದಾಗಿ ಅಖಿಲ ಭಾರತೀಯ ಅಖಾಡ ಪರಿಷದ್(ಎಬಿಎಪಿ) ಸರಕಾರಕ್ಕೆ ಎಚ್ಚರಿಕೆ ನೀಡಿದೆ.

 ಈ ಮಧ್ಯೆ , ಆಕ್ರೋಶಗೊಂಡಿರುವ ಸಂತ ಮುಖಂಡರನ್ನು ಸಮಾಧಾನಗೊಳಿಸುವ ಪ್ರಯತ್ನ ಮುಂದುವರಿಸಿರುವ ರಾಜ್ಯ ಸರಕಾರ, ಮಹಾಂತರ ಪತ್ತೆಗಾಗಿ ವಿಶೇಷ ತನಿಖಾ ದಳ(ಸಿಟ್) ನೇಮಕಗೊಳಿಸಿದೆ. ಎಬಿಎಪಿ ಮುಖಂಡರನ್ನು ಭೇಟಿಯಾಗಿದ್ದ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಸಚಿವರಾದ ಮದನ್ ಕೌಶಿಕ್ ಮತ್ತು ಧನ್‌ಸಿಂಗ್ ರಾವತ್ ಪತ್ತೆ ಕಾರ್ಯಾಚರಣೆ ತೀವ್ರಗೊಳಿಸುವುದಾಗಿ ತಿಳಿಸಿದ್ದರು. ಶುಕ್ರವಾರ ಸಚಿವ ಕೌಶಿಕ್ ಮತ್ತು ಹೆಚ್ಚುವರಿ ಡಿಐಜಿ ಅಶೋಕ್ ಕುಮಾರ್ ಮತ್ತೆ ಅಖಾಡ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News