×
Ad

ಕೇರಳಕ್ಕೆ ಆಗಮಿಸಿದ ಧರ್ಮಗುರು ಟಾಮ್ ಉಳುನ್ನಲಿಲ್

Update: 2017-10-01 19:32 IST

ಕೊಚ್ಚಿ, ಅ.1: ಯೆಮನ್‌ನಲ್ಲಿ ಭಯೋತ್ಪಾದಕರಿಂದ ಅಪಹರಣಗೊಂಡು 18 ತಿಂಗಳು ಬಂಧಿಯಾಗಿದ್ದ ಕೇರಳದ ಕ್ರೈಸ್ತ ಧರ್ಮಗುರು ಫಾದರ್ ಟಾಮ್ ಉಳುನ್ನಲಿಲ್ ರವಿವಾರ ಹುಟ್ಟೂರಿಗೆ ಮರಳಿದರು.

ಕೊಚಿನ್ ವಿಮಾನನಿಲ್ದಾಣದಲ್ಲಿ ಫಾದರ್ ಟಾಮ್‌ರನ್ನು ಕೇರಳ ವಿಧಾನಸಭೆಯ ವಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ಸೇರಿದಂತೆ ಹಲವು ರಾಜಕೀಯ ನಾಯಕರು ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ತನ್ನ ಹುಟ್ಟೂರು ರಾಮಾಪುರಮ್‌ಗೆ ಪ್ರಯಾಣ ಬೆಳೆಸಿದ ಫಾದರ್ ಟಾಮ್, ಅಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅಪಹರಣಕಾರರ ಸೆರೆಯಿಂದ ಅವರನ್ನು ಸೆ.13ರಂದು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಸೆ.28ರಂದು ದಿಲ್ಲಿ ತಲುಪಿದ್ದ ಅವರು ಪ್ರಧಾನಿ ನರೇಂದ್ರ ಮೋದಿ, ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News