ಹೊಸ ಪಕ್ಷವನ್ನು ಘೋಷಿಸಿದ ನಾರಾಯಣ್ ರಾಣೆ
Update: 2017-10-01 19:55 IST
ಹೊಸದಿಲ್ಲಿ, ಅ.1: ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಹೊಸ ಪಕ್ಷವೊಂದನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
“ಹೊಸ ಪಕ್ಷವೊಂದನ್ನು ಸ್ಥಾಪಿಸಲು ನಾನು ನಿರ್ಧರಿಸಿದ್ದೇನೆ. ಹಾಗೂ ಅದಕ್ಕೆ ‘ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ’ ಎಂದು ಹೆಸರಿಡಲಾಗುವುದು. ಪಕ್ಷಕ್ಕೆ ಜನರು ಸೇರ್ಪಡೆಗೊಳ್ಳಲು ಕಾಯುತ್ತಿದ್ದೇನೆ. ನಂತರ ಭವಿಷ್ಯದ ಬಗ್ಗೆ ಯೋಚಿಸುತ್ತೇನೆ” ಎಂದು ರಾಣೆ ಹೇಳಿದ್ದಾರೆ.
ರಾಣೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ತನ್ನನ್ನು ಮುಖ್ಯಮಂತ್ರಿಯಾಗಿ ಮಾಡಲಾಗುತ್ತದೆ ಎನ್ನುವ ಭರವಸೆಯನ್ನು ಈಡೇರಿಸಿಲ್ಲ ಎಂಬ ಕಾರಣ ನೀಡಿ ರಾಣೆ ಕಾಂಗ್ರೆಸ್ ತೊರೆದಿದ್ದರು.