ಗೋಹತ್ಯೆಯ ಆರೋಪ: ಇಬ್ಬರ ಬಂಧನ
Update: 2017-10-02 19:48 IST
ಲಕ್ನೊ, ಅ.2: ಗೋ ಹತ್ಯೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದಲ್ಲಿ ಭಾಟ್‌ಪುರ್ವ ಗ್ರಾಮದಲ್ಲಿ ಇಬ್ಬರನ್ನು ಬಂಧಿಸಿಸಲಾಗಿದ್ದು ಗ್ರಾಮದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್‌ಸೇವಕ್ ಹಾಗೂ ಮಂಗ್ಲಿ ಎಂಬವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲಾಗಿದೆ . ಇವರಿಬ್ಬರು ರವಿವಾರ ರಾತ್ರಿ ಗಣೇಶ್‌ಪ್ರಸಾದ್ ದೀಕ್ಷಿತ್ ಎಂಬವರ ಮನೆಯಿಂದ ಹಸುವನ್ನು ಕದ್ದೊಯ್ದು ಸಮೀಪದ ಹೊಲದಲ್ಲಿ ವಧಿಸಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನೆಲೆಸಿದೆ. ಗ್ರಾಮದಲ್ಲಿ ಮೊಹರ್ರಂ ಮೆರವಣಿಗೆ ಸೋಮವಾರ ನಡೆಯಲಿರುವ ಹಿನ್ನೆಲೆಯಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಈ ಕಿಡಿಗೇಡಿ ಕೃತ್ಯ ನಡೆಸಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಉಮೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.