ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಕಡಿತ
Update: 2017-10-03 20:27 IST
ಹೊಸದಿಲ್ಲಿ, ಅ.3: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರೊಂದಕ್ಕೆ 2 ರೂ.ನಂತೆ ಕಡಿತಗೊಳಿಸಲಾಗಿದೆ. ಇದರಂತೆ ನೂತನ ದರ ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.
“ಪೆಟ್ರೋಲ್ ಹಾಗು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾರತ ಸರಕಾರ ಲೀಟರೊಂದಕ್ಕೆ 2 ರೂ.ನಂತೆ ಕಡಿತಗೊಳಿಸಿದೆ” ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿದೆ.
ಈ ಕಡಿತದಿಂದ ಹೊರೆಯಾಗುವ ನಷ್ಟವನ್ನು ಸರಕಾರದ ಬೊಕ್ಕಸವೇ ಭರಿಸಲಿದೆ. ಆದರೆ ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಹೇಳಿದೆ.