ಆದಿತ್ಯನಾಥ್ ಕತ್ತಲೆಯಲ್ಲಿ ಮುಳುಗುತ್ತಿರುವ ಪಟ್ಟಣದ ‘ನಿಷ್ಪ್ರಯೋಜಕ ಆಡಳಿತಗಾರ’: ರಾಹುಲ್ ಗಾಂಧಿ

Update: 2017-10-03 15:39 GMT

ಹೊಸದಿಲ್ಲಿ, ಅ.3: ಪ್ರವಾಸೋದ್ಯಮ ಯೋಜನೆಯ ಪಟ್ಟಿಯಿಂದ ವಿಶ್ವವಿಖ್ಯಾತ ತಾಜ್ ಮಹಲ್ ನ ಹೆಸರನ್ನು ಕೈಬಿಟ್ಟಿರುವ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಟೀಕಿಸಿರುವ ರಾಹುಲ್ ಗಾಂಧಿ, “ಆದಿತ್ಯನಾಥ್ ಕತ್ತಲೆಯಲ್ಲಿ ಮುಳುಗುತ್ತಿರುವ ಪಟ್ಟಣದ ನಿಷ್ಪ್ರಯೋಜಕ ಆಡಳಿತಗಾರ” ಎಂದು ಹೇಳಿದ್ದಾರೆ.

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅನ್ನು ಪ್ರವಾಸೋದ್ಯಮ ಯೋಜನೆಯ ಪಟ್ಟಿಯಿಂದ ಕೈಬಿಟ್ಟಿರುವ ಆದಿತ್ಯನಾಥ್ ಸರಕಾರದ ವಿರುದ್ಧ ವಿರೋಧ ಪಕ್ಷಗಳು ಟೀಕಾಪ್ರಹಾರವನ್ನು ನಡೆಸಿತ್ತು. ಈ ಹಿಂದೆ ಮಾಡಿದ ಭಾಷಣವೊಂದರಲ್ಲಿ. “ತಾಜ್ ಮಹಲ್ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವುದಿಲ್ಲ” ಎನ್ನುವ ಆದಿತ್ಯನಾಥ್ ರ ಹೇಳಿಕೆಯನ್ನು ಉಲ್ಲೇಖಿಸಿ ಉತ್ತರ ಪ್ರದೇಶ ಸರಕಾರ ‘ಕೋಮುವಾದಿ’ ಎಂದು ಟೀಕಿಸಿತ್ತು.

ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಆದಿತ್ಯನಾಥ್ ಕತ್ತಲೆಯಲ್ಲಿ ಮುಳುಗುತ್ತಿರುವ ಪಟ್ಟಣದ ನಿಷ್ಪ್ರಯೋಜಕ ಆಡಳಿತಗಾರ” ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಯೋಜನೆಯ ಪಟ್ಟಿಯಲ್ಲಿ ನೈಮಿಶರಾಯಣ, ಅಲಹಾಬಾದ್, ಚಿತ್ರಕೂಟ ಸೇರಿದಂತೆ ಇತರ ಸ್ಥಳಗಳ ಹೆಸರಿತ್ತು. ಆದರೆ ಆಗ್ರಾದ ವಿಶ್ವಪ್ರಸಿದ್ಧ ತಾಜ್ ಮಹಲ್ ಪಟ್ಟಿಯಲ್ಲಿರಲಿಲ್ಲ.

“ವಿಶ್ವದ ಜನರಿಗೆ ತಾಜ್ ಮಹಲ್ ಪ್ರವಾಸಿ ಕ್ಷೇತ್ರ ಎಂದು ನಾನು ನಂಬುತ್ತೇನೆ. ಅದು ಉತ್ತರಪ್ರದೇಶದ ಆರ್ಥಿಕತೆಗೂ ಸಹಾಯ ಮಾಡುತ್ತದೆ. ಇದು ಭಾರತದಲ್ಲೇ ನಿರ್ಮಾಣವಾದದ್ದು. ಇತಿಹಾಸದ ಬಗೆಗಿನ ಆದಿತ್ಯನಾಥ್ ರ ನಿರ್ಲಕ್ಷ್ಯ ಹಾಗು ತಾಜ್ ಮಹಲ್ ಸೌಂದರ್ಯವನ್ನು ಸಂರಕ್ಷಿಸುವ ಬಗೆಗಿನ ನಿರ್ಲಕ್ಷಕ್ಕೆ ಜನರು ನಗಲು ಮಾತ್ರ ಸಾಧ್ಯ” ಎಂದು ಸಿಪಿಎಂನ ಬೃಂದಾ ಕಾರಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News