ಎಷ್ಟು ಸಾಧಕರು ನೊಬೆಲ್ ಪ್ರಶಸ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಪಡೆದಿದ್ದಾರೆ ?

Update: 2017-10-05 17:56 GMT

ಇದು ನೊಬೆಲ್ ಪ್ರಶಸ್ತಿ ಪ್ರಕಟವಾಗುವ ಸಮಯ. ಜಗತ್ತಿನಲ್ಲೇ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆ ನೊಬೆಲ್ ನದ್ದು. ಜೀವಮಾನದಲ್ಲೊಮ್ಮೆ ನೊಬೆಲ್ ಗೌರವಕ್ಕೆ ಪಾತ್ರರಾದರೆ ಆ ಕ್ಷೇತ್ರದಲ್ಲಿ ಅವರಷ್ಟು ದೊಡ್ಡ ಸಾಧಕರೇ ಇಲ್ಲ ಎಂಬಷ್ಟು ಗೌರವ ಆ ಪ್ರಶಸ್ತಿ ಪಡೆದವರಿಗೆ ಇಡೀ ವಿಶ್ವದಲ್ಲಿ ಸಲ್ಲುತ್ತದೆ. ಹೀಗಿರುವಾಗ , ಆ ಪ್ರಶಸ್ತಿಯನ್ನು ಒಬ್ಬರೇ  ಎರಡೆರಡು ಬಾರಿ ಪಡೆಯುವುದೆಂದರೆ ? ಅವರು ಅದೆಂತಹ ಮಹಾನ್ ಸಾಧನೆ ಮಾಡಿರಬೇಡ ? 
ನೊಬೆಲ್ ಪ್ರಶಸ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ಪಡೆದ ಅತಿರಥ ಮಹಾರಥರ ಪಟ್ಟಿ ಇಲ್ಲಿದೆ. ಓದಿ ನೀವೂ ಸ್ಫೂರ್ತಿ ಪಡೆಯಿರಿ. 

ಮೇರಿ ಕ್ಯೂರಿ 

1903 ಭೌತ ಶಾಸ್ತ್ರ ನೊಬೆಲ್ 
1911 ರಸಾಯನ ಶಾಸ್ತ್ರ ನೊಬೆಲ್ 


ಲಿನಸ್ ಪೌಲಿಂಗ್ 

1954 ರಸಾಯನ ಶಾಸ್ತ್ರ ನೊಬೆಲ್ 
1962 ಶಾಂತಿ ನೊಬೆಲ್ 


ಜಾನ್ ಬರ್ಡಿನ್  

1956 ಭೌತ ಶಾಸ್ತ್ರ ನೊಬೆಲ್ 
1972 ಭೌತ ಶಾಸ್ತ್ರ ನೊಬೆಲ್ 


ಫ್ರೆಡ್ರಿಕ್ ಸ್ಯಾಂಗರ್ 

1958 ರಸಾಯನ ಶಾಸ್ತ್ರ ನೊಬೆಲ್ 
1980 ರಸಾಯನ ಶಾಸ್ತ್ರ ನೊಬೆಲ್ 


ಇಂಟರ್ನ್ಯಾಷನಲ್ ಕಮಿಟಿ ಆಫ್ ರೆಡ್ ಕ್ರಾಸ್ 

1917 ಶಾಂತಿ ನೊಬೆಲ್ 
1944 ಶಾಂತಿ ನೊಬೆಲ್ 
1963 ಶಾಂತಿ ನೊಬೆಲ್ 


ಆಫೀಸ್ ಆಫ್ ಯುನೈಟೆಡ್ ನೇಶನ್ಸ್ ಹೈ ಕಮಿಷನರ್ ಫ಼ಾರ್ ರೇಫ್ಯುಜೀಸ್ 

1954 ಶಾಂತಿ ನೊಬೆಲ್ 
1981 ಶಾಂತಿ ನೊಬೆಲ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News