ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉದ್ಯೋಗ ಸಮಸ್ಯೆ ಪ್ರಧಾನ ವಿಚಾರ: ಯಶ್ ವಂತ್ ಸಿನ್ಹಾ

Update: 2017-10-06 15:22 GMT

ಹೊಸದಿಲ್ಲಿ, ಅ. 2: ಕೇಂದ್ರ ಸರಕಾರದ ಆರ್ಥಿಕ ನೀತಿಗಳ ಬಗ್ಗೆ ಕಟುವಾಗಿ ಟೀಕಿಸಿದ್ದ ಬಿಜೆಪಿಯ ಹಿರಿಯ ನಾಯಕ ಯಶ್ ವಂತ್ ಸಿನ್ಹಾ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಉದ್ಯೋಗ ಸಮಸ್ಯೆ ಪ್ರಮುಖ ವಿಷಯವಾಗಲಿದೆ ಎಂದು ಶುಕ್ರವಾರ ಪ್ರತಿಪಾದಿಸಿದ್ದಾರೆ.

ದೇಶದ ಆರ್ಥಿಕತೆಯಿಂದ ಹಿಡಿದು ಹೆಚ್ಚುತ್ತಿರುವ ಅಸಹಿಷ್ಣುತೆ ವರೆಗೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು.

  ರಾಮಮಂದಿರ ಅಥವಾ ಸಂವಿಧಾನದ 370ನೇ ಕಲಮಿನಂತಹ ಹಲವು ವಿಷಯಗಳಿಂದ ಮತದಾರರನ್ನು ಧ್ರುವೀಕರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಈ ಯೋಜನೆ ಯಶಸ್ವಿಯಾಗಲಾರದು ಎಂದು ಯಶ್ ವಂತ್ ಸಿನ್ಹಾ ಹೇಳಿದರು.

ನೋಟು ನಿಷೇಧದ ಬಗ್ಗೆ ಮಾತನಾಡಿದ ಅವರು, “ಈ ನಿರ್ಧಾರವನ್ನು ನಾನು ತೀವ್ರವಾಗಿ ವಿರೋಧಿಸಿದ್ದೆ’ ಎಂದರು.

“ಈ ವಿಷಯ ಚರ್ಚೆಯಾಗಿರುವುದು ನನಗೆ ತೃಪ್ತಿ ನೀಡಿದೆ. ನಾನು ಉಲ್ಲೇಖಿಸಿದ ಸತ್ಯ ಹಾಗೂ ಅಂಕಿ-ಅಂಶಗಳನ್ನು ಸಮರ್ಥಿಸಿಕೊಳ್ಳುವೆ. ನಮ್ಮ ದೇಶದ ಆರ್ಥಿಕ ವಲಯದ ಒತ್ತಡ ಕಡಿಮೆ ಆದ ಚಿಹ್ನೆಯನ್ನು ನಾನು ಇದುವರೆಗೆ ನೋಡಿಲ್ಲ” ಎಂದು ಅವರು ಹೇಳಿದರು.

 ನನ್ನ ಒಂದೇ ಒಂದು ಪ್ರಶ್ನೆಗೆ ಕೇಂದ್ರ ಸರಕಾರ ಉತ್ತರ ನೀಡಿಲ್ಲ. ಸಚಿವ ಸಂಪುಟದಲ್ಲಿ ಇದ್ದ ಸಚಿವರ ಪೈಕಿ ನನ್ನ ಪುತ್ರ ಮಾತ್ರ ಮರು ಹೇಳಿಕೆ ನೀಡಿದ್ದ. ಆದರೆ, ಇದು ತಂದೆ-ಮಗನ ಜಗಳ, ಅದನ್ನು ತಿರಸ್ಕರಿಸಬೇಕು ಎಂದು ಜನರು ಹೇಳಿದ್ದರು. ಇದರಿಂದ ಈ ವಿಷಯಗಳು ಮಹತ್ವ ಕಳೆದುಕೊಳ್ಳುತ್ತಿತ್ತು. ಆದರೆ, ಅದು ಹಾಗದೇ ಇರುವುದು ನನಗೆ ಸಮಾಧಾನ ತಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News