×
Ad

“ಸನಾತನ ಸಂಸ್ಥೆಯ ವಿರುದ್ಧ ಸುಳ್ಳು ಆರೋಪ”

Update: 2017-10-07 21:21 IST

ಪಣಜಿ, ಅ.7: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಸನಾತನ ಸಂಸ್ಥೆಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಸಂಸ್ಥೆಯ ವಕ್ತಾರ ಚೇತನ್ ರಾಜ್ ಹಂಸ್ ಹೇಳಿದ್ದಾರೆ.

“ಅಪರಾಧದ ಬಗ್ಗೆ ಸಾಕ್ಷ್ಯಗಳಿರಬೇಕು. ಯಾರಾದರೂ ನಾಪತ್ತೆಯಾಗಿದ್ದಾರೆ ಎಂದಾದಲ್ಲಿ ಅವನು ಅಥವಾ ಅವಳು ಅಪರಾಧ ಎಸಗಿದ್ದಾನೆ/ಳೆ ಎನ್ನಲಾಗುವುದಿಲ್ಲ” ಎಂದವರು ಹೇಳಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಐವರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. “ಈ ಆರೋಪಗಳು ನಿರಾಧಾರವಾಗಿದೆ. ಹಿಂದೂ ವಿರೋಧಿ ಶಕ್ತಿಗಳು ಸುಳ್ಳನ್ನು ಹರಡುತ್ತಿದೆ” ಎಂದವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News