ಫೆಲೆಸ್ತೀನ್ ಸಂಕಷ್ಟ ಕೊನೆಗೊಳಿಸಲು ಸೌದಿ, ರಶ್ಯ ಒತ್ತಾಯ
Update: 2017-10-07 22:23 IST
ಮಾಸ್ಕೊ, ಅ. 7: ಫೆಲೆಸ್ತೀನ್ ಜನತೆಯ ಸಂಕಷ್ಟವನ್ನು ಕೊನೆಗೊಳಿಸುವ ಹಾಗೂ ಈ ಬಿಕ್ಕಟ್ಟಿಗೆ ನ್ಯಾಯಯುತ, ಸಮಗ್ರ ಹಾಗೂ ಶಾಶ್ವತ ಪರಿಹಾರವೊಂದನ್ನು ಕಂಡುಹಿಡಿಯುವ ಅಗತ್ಯಕ್ಕೆ ತಾನು ಮತ್ತು ರಶ್ಯ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಒತ್ತುನೀಡಿರುವುದಾಗಿ ಸೌದಿ ಅರೇಬಿಯದ ದೊರೆ ಸಲ್ಮಾನ್ ಶುಕ್ರವಾರ ಹೇಳಿದ್ದಾರೆ.
ಕೊಲ್ಲಿ ಮತ್ತು ಮಧ್ಯಪ್ರಾಚ್ಯ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಬೇಕಾದರೆ, ಇರಾನ್ ತನ್ನ ವಿಸ್ತರಣವಾದಿ ನೀತಿಗಳನ್ನು ಬಿಡಬೇಕು, ಉತ್ತಮ ನೆರೆಹೊರೆ ತತ್ವಗಳಿಗೆ ಬದ್ಧತೆ ಹೊಂದಬೇಕು, ಅಂತಾರಾಷ್ಟ್ರೀಯ ನಿಯಮಗಳು ಮತ್ತು ಕಾನೂನನ್ನು ಗೌರವಿಸಬೇಕು ಹಾಗೂ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದನ್ನು ಬಿಡಬೇಕು ಎಂಬ ಬಗ್ಗೆ ಮಾಸ್ಕೊದಲ್ಲಿ ನಡೆದ ಮಾತುಕತೆಯಲ್ಲಿ ತಾನು ಮತ್ತು ಮೆಡ್ವೆಡೆವ್ ಸಹಮತ ಹೊಂದಿರುವುದಾಗಿ ದೊರೆ ಸಲ್ಮಾನ್ ಹೇಳಿದರು.