ವಿದೇಶಿ ಭಾಷೆ ತ್ರಿವಳಿ ಭಾಷಾ ಸೂತ್ರದ ಭಾಗವಲ್ಲ
ಹೊಸದಿಲ್ಲಿ, ಅ. 8: ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ಅವಧಿಯಿಂದ ಜರ್ಮನ್, ಫ್ರೆಂಚ್‌ನಂತಹ ವಿದೇಶಿ ಭಾಷೆಗಳು ತ್ರಿವಳಿ ಭಾಷಾ ಸೂತ್ರದ ಭಾಗವಾಗಿರಲಾರದು. ವಿದೇಶಿ ಭಾಷೆಗಳನ್ನು ಕಲಿಯಲು ಉತ್ಸುಕತೆ ತೋರಿಸುವ ವಿದ್ಯಾರ್ಥಿಗಳಿಗೆ ಅದು ನಾಲ್ಕನೇ ಅಥವಾ ಐದನೇ ಭಾಷೆಯಾಗಿರಬೇಕು ಎಂದು ಮಾನವ ಸಂಪನ್ಮೂಲ ಸಚಿವಾಲಯ ಸಿಬಿಎಸ್‌ಇ ಯೊಂದಿಗೆ ಸಂವಹನ ನಡೆಸಿರುವುದಾಗಿ ನಂಬಲಾಗಿದೆ.
ಸಂವಿಧಾನದ 8ನೇ ಪರಿಚ್ಛೇದದಲ್ಲಿ ಮಾಡಲಾದ ಭಾಷೆಗಳ ಪಟ್ಟಿ ತ್ರಿವಳಿ ಭಾಷಾ ಸೂತ್ರ ಅಳವಡಿಸಬೇಕು. ವಿದೇಶಿ ಭಾಷೆಗಳನ್ನು ನಾಲ್ಕನೇ ಭಾಷೆಯಾಗಿ, ಆಯ್ಕೆಯ ವಿಷಯವಾಗಿ ಕಲಿಸಬೇಕು ಎಂದು ಹೇಳುತ್ತದೆ ಎಂದು ಮೂಲಗಳು ತಿಳಿಸಿವೆ.
ಸಿಬಿಎಸ್‌ಇಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಬದಲಾವಣೆ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ತ್ರಿವಳಿ ಭಾಷಾ ಸೂತ್ರ ಅಂದರೆ, ಹಿಂದಿ ಮಾತನಾಡುವ ರಾಜ್ಯದ ವಿದ್ಯಾರ್ಥಿಗಳು ಹಿಂದಿ ಹಾಗೂ ಇಂಗ್ಲೀಷ್‌ನೊಂದಿಗೆ ಆಧುನಿಕ ಭಾರತೀಯ ಭಾಷೆ ಕಲಿಯಬೇಕು. ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳ ವಿದ್ಯಾರ್ಥಿಗಳು ಹಿಂದಿಯೊಂದಿಗೆ ಪ್ರಾದೇಶಿಕ ಭಾಷೆ ಹಾಗೂ ಇಂಗ್ಲೀಷ್ ಕಲಿಯಬೇಕು.