ಎಲ್ಲ ವಿಶೇಷ ಚೇತನರಿಗೂ ತರಬೇತಿ ಸಿಗಲಿ

Update: 2017-10-09 18:45 GMT

ಮಾನ್ಯರಿಗೆ,

ವಿಶೇಷ ಚೇತನರಿಗೆ ಈಗ ಸರಕಾರ ಹಾಗೂ ಸರಕಾರೇತರ ಸೇವಾ ಸಂಸ್ಥೆಗಳು ವಿವಿಧ ರೀತಿಯ ತರಬೇತಿಗಳನ್ನು ನೀಡಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣಗೊಳಿಸುತ್ತಿರುವುದು ಶ್ಲಾಘನೀಯ.
ಅದರೆ ಕಾಲುಗಳಲ್ಲಿ ನ್ಯೂನತೆ ಹಾಗೂ ದೃಷ್ಟಿದೋಷವುಳ್ಳ ವಿಶೇಷ ಚೇತನ ವ್ಯಕ್ತಿಗಳು ತರಬೇತಿ ಕೇಂದ್ರಗಳಿಗೆ ಹೋಗಿ ತರಬೇತಿಯನ್ನು ಪಡೆಯಲು ಅಸಮರ್ಥರಾಗಿರುತ್ತಾರೆ. ಆದ್ದರಿಂದ ಇಂತಹ ವ್ಯಕ್ತಿಗಳು ಬಯಸುವ ಸ್ಥಳಗಳಲ್ಲಿ, ಅವರು ಇಚ್ಛಿಸುವ ಗಣಕ ಯಂತ್ರ ನಿರ್ವಹಣೆ ಅಥವಾ ಇತರ ತರಬೇತಿಗಳನ್ನು ಸರಕಾರ, ಸೇವಾ ಸಂಸ್ಥೆಗಳು ಒದಗಿಸಿದರೆ ಇಂತಹ ವ್ಯಕ್ತಿಗಳು ಕೂಡಾ ಸಾಮಾಜಿಕವಾಗಿ ಸ್ವಾವಲಂಬನೆಯತ್ತ ಸಾಗಲು ಸಾಧ್ಯ.

Writer - -ಚಂದ್ರಶೇಖರ, ಬೆಂಗಳೂರು

contributor

Editor - -ಚಂದ್ರಶೇಖರ, ಬೆಂಗಳೂರು

contributor

Similar News