×
Ad

ಭಾರತದಲ್ಲಿ ಕೃಶಕಾಯದ ಮಕ್ಕಳ ಸಂಖ್ಯೆ 97 ಮಿಲಿಯನ್ : ಸಮೀಕ್ಷಾ ವರದಿ

Update: 2017-10-11 20:40 IST

ಹೊಸದಿಲ್ಲಿ, ಅ.11: ಭಾರತದಲ್ಲಿ 2016ರ ವೇಳೆ 97 ಮಿಲಿಯನ್ ಮಕ್ಕಳು ಕಡಿಮೆ ತೂಕ ಹೊಂದಿದ್ದಾರೆ(ಕೃಶಕಾಯ) ಎಂದು ಜಾಗತಿಕ ಮಟ್ಟದಲ್ಲಿ ನಡೆಸಲಾದ ಅಧ್ಯಯನಾ ವರದಿಯೊಂದರಲ್ಲಿ ತಿಳಿಸಲಾಗಿದೆ. ಅಲ್ಲದೆ ಕಳೆದ ನಾಲ್ಕು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ 19ರ ಕೆಳಹರೆಯದವರಲ್ಲಿ ಬೊಜ್ಜಿನ ಸಮಸ್ಯೆ ಹತ್ತುಪಟ್ಟು ಹೆಚ್ಚಳವಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಬ್ರಿಟನ್‌ನ ಇಂಪೀರಿಯಲ್ ಕಾಲೇಜಿನ ನೇತೃತ್ವದಲ್ಲಿ ನಡೆಸಲಾಗಿರುವ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದಲ್ಲಿ (2016ರ ಅವಧಿಯಲ್ಲಿ) 75 ಮಿಲಿಯನ್ ಹುಡುಗಿಯರು ಹಾಗೂ 117 ಮಿಲಿಯನ್ ಹುಡುಗರು ಸೇರಿ ಒಟ್ಟು 192 ಮಿಲಿಯನ್ ಜನತೆ ಸಾಮಾನ್ಯ ಅಥವಾ ತೀವ್ರವಾದ ತೂಕ ಕಡಿಮೆ ಸಮಸ್ಯೆಯಿಂದ ಬಾಧಿತರಾಗಿದ್ದಾರೆ. ಇದೇ ಪ್ರವೃತ್ತಿ ಮುಂದುವರಿದರೆ 2022ರ ಸಂದರ್ಭ ಈ ಸಮಸ್ಯೆ ಇನ್ನಷ್ಟು ತೀವ್ರವಾಗಬಹುದು ಎಂದು ತಿಳಿಸಲಾಗಿದೆ.

     ಐದು ವರ್ಷಕ್ಕಿಂತ ಹೆಚ್ಚು ಪ್ರಾಯದ 130 ಮಿಲಿಯನ್ ಜನತೆ , 5ರಿಂದ 19 ವರ್ಷ ಪ್ರಾಯದ 31.5 ಮಿಲಿಯನ್ ಜನತೆ ಹಾಗೂ 20 ಮತ್ತು ಅದಕ್ಕಿಂತ ಹೆಚ್ಚು ಪ್ರಾಯದ 97.4 ಮಿಲಿಯನ್ ಜನರನ್ನು ತೂಕ ಮತ್ತು ಎತ್ತರದ ಮಾನದಂಡದ ಆಧಾರದಲ್ಲಿ ಈ ಸಮೀಕ್ಷೆಗೆ ಒಳಪಡಿಸಲಾಗಿದೆ. 1975ರಲ್ಲಿ ಜಾಗತಿಕ ಮಟ್ಟದಲ್ಲಿ ಮಕ್ಕಳ ಹಾಗೂ ಪ್ರಾಯಪ್ರಬುದ್ಧರಾದವರಲ್ಲಿ ಬೊಜ್ಜಿನ ಸಮಸ್ಯೆ ಶೇ.1ಕ್ಕೂ ಕೆಳಮಟ್ಟದಲ್ಲಿದ್ದರೆ 2016ರಲ್ಲಿ ಬಾಲಕಿಯರಲ್ಲಿ ಶೇ.6ರಷ್ಟು ಹಾಗೂ ಬಾಲಕರಲ್ಲಿ ಶೇ.8ರ ಮಟ್ಟದಲ್ಲಿತ್ತು . ಅಂದರೆ ಶೇ.10ರಷ್ಟು ಹೆಚ್ಚಳವಾದಂತಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

 ಅಲ್ಲದೆ 2016ರಲ್ಲಿ ಇನ್ನೂ 213 ಮಿಲಿಯನ್ ಜನರು ಅಧಿಕ ತೂಕ ಹೊಂದಿದ್ದರೂ ಬೊಜ್ಜಿನ ಲಕ್ಷಣ ಇವರಲ್ಲಿ ಕಂಡುಬಂದಿಲ್ಲ. ಕಡಿಮೆ ಆದಾಯದ ಅಥವಾ ಮಧ್ಯಮ ಆದಾಯದ ದೇಶಗಳ ಜನರಲ್ಲಿ ಬೊಜ್ಜಿನ ಸಮಸ್ಯೆ ಸುಮಾರು 10 ಪಟ್ಟು ಹೆಚ್ಚಿದೆ. ಆದಾಯ ಹೆಚ್ಚಿರುವ ದೇಶದ ಜನರಲ್ಲೂ ಈ ಸಮಸ್ಯೆ ಅಧಿಕವಾಗುತ್ತಿರುವುದನ್ನು ಗಮನಿಸಬೇಕು ಎಂದು ಲಂಡನ್‌ನ ಇಂಪೀರಿಯಲ್ ಕಾಲೇಜಿನ ಪ್ರೊಫೆಸರ್ ಮಜೀದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News