ಪರಮಾಣು ಶಸ್ತ್ರಾಸ್ತ್ರ ಸಂಗ್ರಹಿಸಲು ಸುರಂಗಗಳನ್ನು ತೋಡುತ್ತಿರುವ ಪಾಕಿಸ್ತಾನ

Update: 2017-10-11 15:45 GMT

ಹೊಸದಿಲ್ಲಿ, ಅ. 8: ನೂರಾನಲ್ವತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಲು ಪಾಕಿಸ್ತಾನ ಈಗಾಗಲೇ ಭೂಗತ ಸುರಂಗಗಳ ಬೃಹತ್ ಜಾಲವೊಂದನ್ನು ನಿರ್ಮಿಸುತ್ತಿದೆ ಎಂದು ಬುಧವಾರ ವರದಿಯೊಂದು ಹೇಳಿದೆ.

ಈ ನಿವೇಶನ ಪಾಕಿಸ್ತಾನದ ಪಂಜಾಬ್ ಜಿಲ್ಲೆಯ ಮಿಯಾನ್‌ವಾಲಿಯ ಥಮೇವಾಲಿಯಲ್ಲಿದೆ. ಇದು ಅಮೃತಸರದಿಂದ 350 ಕಿ.ಮೀ., ಚಂಡಿಗಢದಿಂದ 550 ಕಿ.ಮೀ. ಹಾಗೂ ಹೊಸದಿಲ್ಲಿಯಿಂದ 750 ಕಿ.ಮೀ. ದೂರದಲ್ಲಿದೆ ಎಂದು ಡಬ್ಲುಐಒಎನ್ ವರದಿ ಹೇಳಿದೆ.

ಭಾರೀ ಬೇಲಿಯಿಂದ ಸುತ್ತುವರಿಯಲ್ಪಟ್ಟ ಈ ಪರಮಾಣು ಸೌಲಭ್ಯ 10-10 ಎತ್ತರ, ಉದ್ದ ಹೊಂದಿದ್ದು ಹಾಗೂ ಮೂರು ಅಂತರ್ ಸಂಪರ್ಕದ ಸುರಂಗವನ್ನು ಹೊಂದಿದೆ ಎಂದು ವರದಿ ಪ್ರತಿಪಾದಿಸಿದೆ.

ಟ್ರಾನ್ಸ್‌ಪೋರ್ಟರ್ ಇರೆಕ್ಟರ್ ಲಾಂಚರ್ಸ್‌ (ಟಿಇಎಲ್)ನ ಚಲನೆಯನ್ನು ಸುಸೂತ್ರಗೊಳಿಸುವ ಪ್ರಯತ್ನವಾಗಿ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ಇರುವ ರಸ್ತೆಗಳನ್ನು ಸುರಂಗದ ಸುತ್ತ ನಿರ್ಮಿಸಲಾಗಿದೆ. ಒಂದಕ್ಕಿಂತ ಹೆಚ್ಚು ಕ್ಷಿಪಣಿಗಳನ್ನು ಹಾರಿಸಲು ಇದು ನೆರವಾಗುತ್ತದೆ ಎಂದು ಡಬ್ಲುಐಒಎನ್ ವರದಿ ಹೇಳಿದೆ.

ಕಳೆದ ತಿಂಗಳು ಪಾಕಿಸ್ತಾನದ ಮುಖ್ಯಮಂತ್ರಿ ಶಹೀದ್ ಖಕ್ಕಾನ್ ಅಬ್ಬಾಸಿ ದೇಶ ಪರಮಾಣು ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸಮರ್ಥ ವಾಗಿದೆ ಎಂದು ಹೇಳಿದ್ದರು.

ಬೇಹುಗಾರಿಕೆ ಮಾಹಿತಿ ಪ್ರಕಾರ, ಪ್ರತಿ ಸುರಂಗದಲ್ಲಿ 12ರಿಂದ 24 ಪರಮಾಣು ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಬಹುದು. ಯಾವುದೇ ತೊಂದರೆ ಉಂಟಾಗದಂತೆ ಈ ಪ್ರದೇಶದ ಸುತ್ತ ವಯರ್ ಬೇಲಿ ಹಾಕಲಾಗಿದೆ ಹಾಗೂ ತಡೆಗಳನ್ನು ಅಳವಡಿಸಲಾಗಿದೆ ಎಂದು ಡಬ್ಲುಐಒಎನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News