×
Ad

ವಿ.ವಿ.ಗಳ 7.51 ಲಕ್ಷ ಬೋಧಕರಿಗೆ 7ನೇ ವೇತನ ಆಯೋಗದ ಸೌಲಭ್ಯ

Update: 2017-10-11 21:59 IST

ಹೊಸದಿಲ್ಲಿ, ಅ. 8: ಕೇಂದ್ರೀಯ ಮತ್ತು ರಾಜ್ಯ ವಿ.ವಿ. ಅಧ್ಯಾಪಕರಿಗೆ ಮೊದಲೇ ದೀಪಾವಳಿ ಬರುವ ಸಾಧ್ಯತೆ ಇದೆ. ಯಾಕೆಂದರೆ, ವಿ.ವಿ. ಅಧ್ಯಾಪಕರಿಗೂ 7ನೇ ವೇತನ ಆಯೋಗವನ್ನು ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಈ ಸಂಬಂಧ ಬುಧವಾರ ಘೋಷಣೆ ಮಾಡಿರುವ ಮಾನವ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್, ಕೇಂದ್ರದಿಂದ ಧನ ಸಹಾಯ ಪಡೆಯುವ ಸ್ವಾಯತ್ತ ವಿ.ವಿ.ಗಳು ಹಾಗೂ 43 ಕೇಂದ್ರೀಯ ವಿ.ವಿ.ಗಳು 7ನೇ ವೇತನ ಆಯೋಗದ ಸೌಲಭ್ಯ ಪಡೆಯಲಿವೆ. ಶಿಫಾರಸಿಗೆ 34 ತಿದ್ದುಪಡಿಗಳೊಂದಿಗೆ ಜೂ. 28ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದಿದ್ದಾರೆ.

329 ರಾಜ್ಯ ವಿ.ವಿ. ಹಾಗೂ 12,912 ಕಾಲೇಜುಗಳ ಕಿರಿಯ ಹಾಗೂ ಸಹ ಪ್ರಾದ್ಯಾಪಕರು ಸೇರಿದಂತೆ ಒಟ್ಟು 7.51 ಲಕ್ಷ ಬೋಧಕರು 2016 ಜನವರಿ 1ರಿಂದ ಅನ್ವಯವಾಗುವಂತೆ 7ನೇ ವೇತನ ಆಯೋಗದ ಸೌಲಭ್ಯ ಪಡೆಯಲಿದ್ದಾರೆ ಎಂದು ಸಚಿವರು ಸಂಪುಟ ಸಭೆಯ ಬಳಿಕ ತಿಳಿಸಿದರು.

ಈ ಏಳನೇ ವೇತನಾ ಆಯೋಗದ ಅನ್ವಯ ವೇತನ ಏರಿಕೆ 10 ಸಾವಿರದಿಂದ 50 ಸಾವಿರದ ವರೆಗೆ ಇರಲಿದೆ. 7ನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕಾಗಿ ಕೇಂದ್ರ ಸರಕಾರ ಪ್ರತಿ ವರ್ಷ 30,748 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಜಾವ್ಡೇಕರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News