ದಯವಿಟ್ಟು ಗಮನಿಸಿ ರಿಲೀಸ್‌ಗೆ ಸಿದ್ಧ

Update: 2017-10-13 12:42 GMT

ರೋಹಿತ್ ಪಡಾಕಿ ಚೊಚ್ಚಲ ನಿರ್ದೇಶನದ ‘ದಯವಿಟ್ಟು ಗಮನಿಸಿ’ ಬಿಡುಗಡೆಗೆ ಸಿದ್ಧವಾಗಿದ್ದು, ದೀಪಾವಳಿಯಂದು ಬೆಳ್ಳಿತೆರೆಗೆ ಅಪ್ಪಳಿಸಲಿರುವುದು ಪಕ್ಕಾ ಆಗಿದೆ. ವಿಶಿಷ್ಟವಾದ ಕಥಾವಸ್ತುವಿನಿಂದಾಗಿ ಈಗಾಗಲೇ ಸ್ಯಾಂಡಲ್‌ವುಡ್‌ನ ಗಮನಸೆಳೆದಿರುವ ಈ ಚಿತ್ರವು ಕನ್ನಡದಲ್ಲಿ ಹೊಸ ಟ್ರೆಂಡ್ ಸೆಟ್ಟರ್ ಆಗಲಿದೆಯೆಂಬುದು ಚಿತ್ರಪಂಡಿತರ ಅಂಬೋಣ. ಇನ್ನೊಂದು ಸ್ವಾರಸ್ಯವೆಂದರೆ ‘ದಯವಿಟ್ಟು ಗಮನಿಸಿ’ ಅಕ್ಟೋಬರ್ 15ರಂದು ಆಸ್ಟ್ರೇಲಿಯದ ಪ್ರೀಮಿಯರ್ ಪ್ರದರ್ಶನವನ್ನು ಕಾಣಲಿದೆ.

ರಘುಮುಖರ್ಜಿ, ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ವಸಿಷ್ಠ ಎನ್. ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್, ಸಂಯುಕ್ತ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಚಿತ್ರದಲ್ಲಿದೆ.

ಸ್ಯಾಂಡಲ್‌ವುಡ್‌ನ ಹಲವಾರು ಚಿತ್ರಗಳಿಗೆ ಗೀತರಚನಾಕಾರರಾದ ರೋಹಿತ್ ಪಡಾಕಿಗೆ ‘ದಯವಿಟ್ಟು ಗಮನಿಸಿ’ ಒಂದು ಲೆಕ್ಕದಲ್ಲಿ ಅಗ್ನಿಪರೀಕ್ಷೆ ಯೇ ಹೌದು. ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ಧರಿಸಿರುವ ಅವರ ಚಿತ್ರ ಬದುಕಿಗೆ ಈ ಚಿತ್ರದ ಗೆಲುವು ನಿರ್ಣಾಯಕವಾಗಲಿದೆ. ಜನಪ್ರಿಯ ನಟಿ ಮೇಘನಾರಾಜ್ ಈ ಚಿತ್ರದ ವಿಶೇಷ ಹಾಡಿನ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅನುಪ್ ಸಿಳಿನ್ ಸಂಗೀತ ನೀಡಿರುವ ಈ ಚಿತ್ರ ಕ್ಕಾಗಿ ಜಯಂತ್ ಕಾಯ್ಕಿಣಿ ಬರೆದಿರುವ ರೋಮ್ಯಾಂಟಿಕ್ ಹಾಡೊಂದು ಈಗಾಗಲೇ ಜನಪ್ರಿಯವಾಗಿದೆ. ಈಗಾಗಲೇ ಒಂದರ ಬೆನ್ನ ಹಿಂದೆ ಒಂದರಂತೆ ಚಿತ್ರದ ಟೀಸರ್‌ಗಳು ಅಂತರ್ಜಾಲತಾಣಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಪ್ರೇಮಿ ಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News