×
Ad

ಶಿಕ್ಷಣಸಂಸ್ಥೆಗಳಲ್ಲಿ ರಾಜಕೀಯ, ಮುಷ್ಕರ ಕೊನೆಗೊಳಿಸಿ: ಕೇರಳ ಹೈಕೋರ್ಟ್ ಮಧ್ಯಂತರ ಆದೇಶ

Update: 2017-10-13 21:19 IST

ಕೊಚ್ಚಿ,ಅ.13: ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್ ರಾಜಕೀಯ, ಮುಷ್ಕರ ಹಾಗೂ ಪ್ರತಿಭಟನೆಗಳಿಗೆ ಅಂತ್ಯಹಾಡುವಂತೆ ಕೇರಳ ಹೈಕೋರ್ಟ್ ಶುಕ್ರವಾರ ನೀಡಿದ ಮಧ್ಯಂತರ ಆದೇಶವೊಂದರಲ್ಲಿ ತಿಳಿಸಿದೆ. ಪೊನ್ನಾಣಿಯ ಎಂಇಎಸ್ ಕಾಲೇಜ್‌ನ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ವೇಳೆ ನಡೆದ ಘರ್ಷಣೆಯ ಬಳಿಕ ಎಸ್‌ಎಫ್‌ಐ ವಿದ್ಯಾರ್ಥಿಗಳು ಮುಷ್ಕರ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಧ್ಯಪ್ರವೇಶ ಕೋರಿ ಕಾಲೇಜ್‌ನ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿತ್ತು. ಮುಂದಿನ ಆಲಿಕೆಯನ್ನು ನ್ಯಾಯಾಲಯ ಸೋಮವಾರ ನಡೆಸಲಿದೆ.

  ಶಿಕ್ಷಣ ಸಂಸ್ಥೆಗಳಲ್ಲಿ ಅದ್ಯಯನ ನಡೆಸಬೇಕಾದ ವಿದ್ಯಾರ್ಥಿಗಳು ರಾಜಕೀಯ ಹಾಗೂ ಮುಷ್ಕರದಲ್ಲಿ ತೊಡಗಬಾರದೆಂದು ನ್ಯಾಯಾಲಯ ಕಿವಿಮಾತು ಹೇಳಿದೆ. ಮುಷ್ಕರ ಹಾಗೂ ಪ್ರತಿಭಟನೆಗಳಲ್ಲಿ ಭಾಗವಹಿಸುವ ಮೂಲಕ ಶಾಂತಿಯುತ ವಾತಾವರವಣವನ್ನು ಹದಗೆಡಿಸುವ ವಿದ್ಯಾರ್ಥಿಗಳನ್ನು ಉಚ್ಚಾಟಿಸುವ ಅಧಿಕಾರ ಕಾಲೇಜ್ ಆಡಳಿತಕ್ಕಿದೆಯೆಂದು ನ್ಯಾಯಾಲಯ ಪ್ರತಿಪಾದಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News