×
Ad

ಜಿಜೆಎಂ ಬೆಂಬಲಿಗರ ಜೊತೆ ಘರ್ಷಣೆ: ಹಲವಾರು ಪೊಲೀಸರಿಗೆ ಗಾಯ

Update: 2017-10-13 21:33 IST

ಡಾರ್ಜಿಲಿಂಗ್,ಅ.13: ಗೂರ್ಖಾ ಜನಮುಕ್ತಿ ಮೋರ್ಚಾ ಪಕ್ಷದ ನಾಯಕ ಬಿಮಲ್ ಗುರುಂಗ್‌ಗೆ ನಿಷ್ಠರಾದ ಕಾರ್ಯಕರ್ತರ ಗುಂಪೊಂದರ ಜೊತೆ ಶುಕ್ರವಾರ ಡಾರ್ಜಿಲಿಂಗ್ ಪರ್ವತಶ್ರೇಣಿಯ ಅರಣ್ಯ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ಹಲವಾರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.

ಇಂದು ಮುಂಜಾನೆ 5 ಗಂಟೆಯ ವೇಳೆಗೆ ಪಟ್ಲೆಬಾಸ್ ಪ್ರದೇಶದ ಸಮೀಪದ ಅರಣ್ಯದಲ್ಲಿರುವ ಅಡಗುದಾಣವೊಂದರ ಮೇಲೆ ಪೊಲೀಸರ ತಂಡವೊಂದು ದಾಳಿ ನಡೆಸಿದಾಗ ಘರ್ಷಣೆ ಆರಂಭಗೊಂಡಿತೆಂದು ಅಧಿಕೃತ ಮೂಲಗಳು ತಿಳಿಸಿವೆ.

ಗುರುಂಗ್ ಈ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವುದಾಗಿ ದೊರೆತ ಮಾಹಿತಿಯನ್ನು ಆಧರಿಸಿ ಕಾರ್ಯಪ್ರವೃತ್ತರಾದ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರು. ಆಗ ಗುರುಂಗ್‌ನ ಬೆಂಬಲಿಗರು ಪೊಲೀಸರ ಮೇಲೆ ಗುಂಡು ಹಾರಿಸಿದರು ಹಾಗೂ ಕಲ್ಲುಗಳನ್ನು ತೂರಿದರು. ಘರ್ಷಣೆಯು ಸಂಜೆಯವರೆಗೂ ಮುಂದುವರಿದಿರುವುದಾಗಿ ತಿಳಿದುಬಂದಿದೆ.

 ಡಾರ್ಜಿಲಿಂಗ್ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ನಡೆದ ವಿವಿಧ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಗುರುಂಗ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆಯಡಿ ಹಲವಾರು ಪ್ರಕರಣಗಳನ್ನು ದಾಖಲಿಸಿದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News