ಬಾಡಿಗೆ ಮನೆ ಸುಲಿಗೆ

Update: 2017-10-13 18:40 GMT

ಮಾನ್ಯರೆ,

ಇಂದು ರಾಜ್ಯ ಹಾಗೂ ದೇಶದ ಮೂಲೆಮೂಲೆಗಳಿಂದ ಅನೇಕರು ಸಿಲಿಕಾನ್ ಸಿಟಿ ಬೆಂಗಳೂರು ನಗರಕ್ಕೆ ಜೀವನೋಪಾಯಕ್ಕಾಗಿ ಉದ್ಯೋಗವನ್ನ್ನರಿಸಿಕೊಂಡು ಬರುತ್ತಾರೆ. ದುಡಿಯಲು ಒಂದು ಕೆಲಸ ಗಿಟ್ಟಿಸಿದ ಬಳಿಕ ವಾಸಿಸಲು ಮನೆಯ ಹುಟುಕಾಟದಲ್ಲಿ ತೊಡಗಿದವರಿಗೆ ಇಲ್ಲಿ ಅಚ್ಚರಿ ಕಾದಿರುತ್ತದೆ, ಉದ್ಯಾನ ನಗರಿಯಲ್ಲಿ ಒಂದು ಬೆಡ್‌ರೂಂ ಮನೆಗಾಗಿ ಕನಿಷ್ಠ ಹತ್ತರಿಂದ ಹನ್ನೆರಡು ಸಾವಿರ ರೂಪಾಯಿ ಬಾಡಿಗೆ ಇದೆ. ಅಲ್ಲದೆ ಸುಮಾರು ಒಂದು ಕ್ಷ ರೂ. ವರೆಗೆ ಮುಂಗಡ ಕೊಡಬೇಕಾಗುತ್ತದೆ. ಇನ್ನು ಎರಡ್ಮೂರು ಕೋಣೆಗಳ ಮನೆಗಳ ಬಾಡಿಗೆಯ ಲೆಕ್ಕವಂತೂ ಹೇಳುವಂತಿಲ್ಲ, ಕಷ್ಟಪಟ್ಟು ಅಲ್ಪಸ್ವಲ್ಪ ದುಡಿಯುವವರು ತಾವು ದುಡಿಯುವ ಹೆಚ್ಚಿನ ಹಣ ಬಾಡಿಗೆ ತುಂಬುವುದರಲ್ಲಿಯೆ ಖರ್ಚಾಗುತ್ತದೆ. ಇಲ್ಲಿ ನೌಕರಿಗಾಗಿ ವಲಸೆಬರುತ್ತಿರುವ ಮಧ್ಯಮ ಹಾಗೂ ಬಡ ವರ್ಗದ ಸಮೂಹವು ವಸತಿಯಿಲ್ಲದೆ ಒದ್ದಾಡುವಂತಾಗಿದೆ. ಮನೆಗಳ ಮಾಲಕರು ಯಾವುದೇ ನಿಯಂತ್ರಣವಿಲ್ಲದೆ ತಮ್ಮ ಮನಸ್ಸಿಗೆ ಬಂದಂತೆ ಬಾಡಿಗೆದಾರರಿಂದ ಸಿಕ್ಕಾಪಟ್ಟೆ ಹಣ ಸುಲಿಯುತ್ತಾರೆ. ಆದ್ದರಿಂದ ಸರಕಾರವು ಸಾಧ್ಯವಾದಷ್ಟು ತಾವೇ ಬಾಡಿಗೆ ದರವನ್ನು ನಿಗದಿಪಡಿಸಿ, ಇಂತಹ ಹಗಲು ದರೋಡೆಕೋರರ ಮೇಲೆ ನಿಯಂತ್ರಣ ಹೇರಿ ವಲಸಿಗರಿಗೆ ಸಹಾಯ ಮಾಡಲಿ.

Writer - -ರಿಯಾಝ್ ಅಹ್ಮದ್, ರೋಣ

contributor

Editor - -ರಿಯಾಝ್ ಅಹ್ಮದ್, ರೋಣ

contributor

Similar News