81 ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಿಸಿದ ದಿಗ್ಗಜ ಆಸ್ಕರ್ ಸಮಿತಿಯಿಂದಲೇ ಔಟ್

Update: 2017-10-15 07:41 GMT

ಹೊಸದಿಲ್ಲಿ, ಅ.15: ಹಾಲಿವುಡ್ ನ ಪ್ರಸಿದ್ಧ ನಿರ್ಮಾಪಕ, 81 ಆಸ್ಕರ್ ಪ್ರಶಸ್ತಿ ಪುರಸ್ಕೃತ ಚಿತ್ರಗಳನ್ನು ನಿರ್ಮಿಸಿದ ಖ್ಯಾತಿಯ ಹಾರ್ವೆ ವೈನ್ ಸ್ಟೈನ್ ರನ್ನು ಆಸ್ಕರ್ ಸಮಿತಿಯಿಂದ ಹೊರ ಹಾಕಲಾಗಿದೆ.

ಹಾಲಿವುಡ್ ನ ಪ್ರಸಿದ್ಧ ಚಿತ್ರಗಳಾದ ಪಲ್ಪ್ ಫಿಕ್ಶನ್, ಕ್ಲೆರ್ಕ್ಸ್, ದ ಕ್ರಯಿಂಗ್ ಗೇಮ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ ಹಾರ್ವೆ ವೈನ್ ಸ್ಟೈನ್ ರನ್ನು ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಆಸ್ಕರ್ ಸಮಿತಿಯಿಂದ ಹೊರಹಾಕಲಾಗಿದೆ.

ಆ್ಯಂಜಲಿನಾ ಜ್ಯೂಲಿ ಸೇರಿದಂತೆ 30 ನಟಿಯರು ಇವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದರಲ್ಲಿ ಮೂರು ಅತ್ಯಾಚಾರ ಆರೋಪಗಳೂ ಸೇರಿವೆ.

"ಲೈಂಗಿಕ ನಡವಳಿಕೆ ಹಾಗು ಕೆಲಸದ ಸ್ಥಳದಲ್ಲಿ ದೌರ್ಜನ್ಯಗಳು ಇಂಡಸ್ಟ್ರಿಯಲ್ಲಿ ನಡೆಯುವುದಿಲ್ಲ" ಎನ್ನುವ ಸಂದೇಶವನ್ನು ರವಾನಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಕರ್ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News