ಶಾಂಘೈ ಮಾಸ್ಟರ್ಸ್ ಟೂರ್ನಿ ಗೆದ್ದ ಫೆಡರರ್
Update: 2017-10-15 17:02 IST
ಹೊಸದಿಲ್ಲಿ, ಅ.15: ಭಾರೀ ಕುತೂಹಲ ಮೂಡಿಸಿದ್ದ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ರೋಜರ್ ಫೆಡರರ್ ಅವರು ರಫೆಲ್ ನಡಾಲ್ ರನ್ನು 6-4, 6-3 ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದು ಫೆಡರರ್ ಅವರಿಗೆ ದಕ್ಕಿದ 94ನೆ ಟೈಟಲ್ ಆಗಿದೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಫೆಡರರ್ ನಡಾಲ್ ರನ್ನು 6-4, 6-3 ಅಂತರದಿಂದ ಮಣಿಸಿದರು.