WWE ಪ್ರವೇಶಿಸಲಿರುವ ಭಾರತದ ಪ್ರಪ್ರಥಮ ಮಹಿಳೆ ಕವಿತಾ ದೇವಿ

Update: 2017-10-16 08:05 GMT

ಹೊಸದಿಲ್ಲಿ, ಅ.16: ಮಾಜಿ ಪವರ್ ಲಿಫ್ಟರ್ ಕವಿತಾ ದೇವಿ ಅವರು ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ ಮೆಂಟ್ (WWE) ಗೆ ಪ್ರವೇಶಿಸಲಿರುವ ಭಾರತದ ಪ್ರಪ್ರಥಮ ಮಹಿಳೆಯಾಗಲಿದ್ದಾರೆ ಎಂದು ಪ್ರಸ್ತುತ WWE ಚಾಂಪಿಯನ್ ಆಗಿರುವ ಭಾರತ ಮೂಲದ ಜಿಂದರ್ ಮಹಲ್ ಸ್ಪಷ್ಟಪಡಿಸಿದ್ದಾರೆ.

ಪಂಜಾಬ್ ಮೂಲದ ಕುಸ್ತಿ ತರಬೇತಿ ಕೇಂದ್ರದಲ್ಲಿ ‘ದ ಗ್ರೇಟ್ ಖಲಿ’ಯವರ ಮಾರ್ಗದರ್ಶನದಲ್ಲಿ ಕವಿತಾ ವೃತ್ತಿಪರ ಕುಸ್ತಿಪಟುವಾಗಲು ನಿರಂತರ ತರಬೇತಿ ಪಡೆಯುತ್ತಿದ್ದರು. ಪ್ರಸಿದ್ಧ ಕುಸ್ತಿಪಟು ಬಿ.ಬಿ. ಬುಲ್ ಬುಲ್ ಎಂಬಾಕೆಯ ವಿರುದ್ಧ ಕವಿತಾರ ಕುಸ್ತಿ ಪಂದ್ಯದ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. 2016ರ ದಕ್ಷಿಣ ಏಷಿಯನ್ ಗೇಮ್ಸ್ ನಲ್ಲಿ ಕವಿತಾ ದೇವಿ ಚಿನ್ನದ ಪದಕ ಗಳಿಸಿದ್ದರು.

WWE ರಿಂಗ್ ನಲ್ಲಿ ಆಡಲಿರುವ ಮೊದಲ ಭಾರತೀಯ ಮಹಿಳೆಯಾಗಲಿದ್ದಾರೆ ಕವಿತಾ ದೇವಿ. 2018ರ ಜನವರಿಯಲ್ಲಿ ಒರ್ಲಾಂಡೋದ WWE ಪ್ರದರ್ಶನ ಕೇಂದ್ರದಲ್ಲಿ ಅವರ ತರಬೇತಿ ಆರಂಭವಾಗಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News