ಇರಾನ್ ಒಪ್ಪಂದವನ್ನು ಅಮೆರಿಕ ಅಪಾಯಕ್ಕೊಡ್ಡದು: ಫ್ರಾನ್ಸ್ ವಿದೇಶ ಸಚಿವ ಆಶಯ

Update: 2017-10-16 15:54 GMT

ಲಕ್ಸಂಬರ್ಗ್, ಅ. 16: ಇರಾನ್ ಜೊತೆಗಿನ ಪರಮಾಣು ಒಪ್ಪಂದವನ್ನು ಅಮೆರಿಕ ಕಾಂಗ್ರೆಸ್ ಅಪಾಯಕ್ಕೆ ಗುರಿಪಡಿಸುವುದಿಲ್ಲ ಎಂಬ ವಿಶ್ವಾಸವನ್ನು ಫ್ರಾನ್ಸ್ ವಿದೇಶ ಸಚಿವ ಜೀನ್-ಯವೆಸ್ ಲಿ ಡ್ರಿಯಾನ್ ಸೋಮವಾರ ವ್ಯಕ್ತಪಡಿಸಿದ್ದಾರೆ.

ಒಪ್ಪಂದದಿಂದ ಅಮೆರಿಕ ಹೊರಬರುವುದು ಎಂಬ ಬೆದರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಡ್ಡಿರುವ ಹಿನ್ನೆಲೆಯಲ್ಲಿ ಫ್ರಾನ್ಸ್ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.

‘‘ಒಪ್ಪಂದವನ್ನು ಅನುಮೋದಿಸದಿರುವ ಟ್ರಂಪ್ ನಿರ್ಧಾರವು ನಮ್ಮ ನಂಬಿಕೆಗೆ, ಐಎಇಎ ನಂಬಿಕೆಗೆ ಹಾಗೂ ಜರ್ಮನಿ ಚಾನ್ಸಲರ್, ಬ್ರಿಟಿಶ್ ಪ್ರಧಾನಿ ಮತ್ತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್ ವ್ಯಕ್ತಪಡಿಸಿರುವ ಅಭಪ್ರಾಯಗಳಿಗೆ ಹೊಂದುವುದಿಲ್ಲ’’ ಎಂದರು.

‘‘ಅಮೆರಿಕದ ಕಾಂಗ್ರೆಸ್ ಈ ಒಪ್ಪಂದವನ್ನು ಅಪಾಯಕ್ಕೆ ಒಡ್ಡುವುದಿಲ್ಲ ಎಂಬ ಭಾವನೆಯನ್ನು ಹೊಂದಿದ್ದೇವೆ’’ ಎಂದು ಫ್ರಾನ್ಸ್ ಸಚಿವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News