×
Ad

ಒಂದೇ ಕುಟುಂಬದ ಐವರ ಮೃತದೇಹ ಪೊದೆಯಲ್ಲಿ ಪತ್ತೆ

Update: 2017-10-17 20:10 IST

ಹೈದರಾಬಾದ್, ಅ. 17: ಹೈದರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಹೊರ ರಿಂಗ್ ರೋಡ್‌ನ ಸಮೀಪ ಪೊದೆಯೊಂದರಲ್ಲಿ ಮೂವರು ಮಹಿಳೆಯರು, ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಮೃತಪಟ್ಟವರನ್ನು ಪ್ರಭಾಕರ್ ರೆಡ್ಡಿ (30), ಅವರ ಪುತ್ರ ವಾಹಿಸ್ಟ್ (2), ಪತ್ನಿ ಮಾಧವಿ (26), ಅತ್ತೆ ಲಕ್ಷ್ಮೀ (42) ಹಾಗೂ ಅವರ ಪುತ್ರಿ ಸಿಂಧುಜಾ (16) ಎಂದು ಗುರುತಿಸಲಾಗಿದೆ. ಎಲ್ಲರೂ ಸಂಗಾರೆಡ್ಡಿ ಜಿಲ್ಲೆಯ ಅಮೀನ್‌ಪುರ ಗ್ರಾಮಕ್ಕೆ ಸೇರಿದವರು.

 ಮಾಧವಿ, ಲಕ್ಷ್ಮೀ ಹಾಗೂ ಸಿಂಧುಜಾ ಅವರ ಮೃತದೇಹಗಳು ಪೊದೆಯಲ್ಲಿ ಹಾಗೂ ಪ್ರಭಾಕರ್ ಹಾಗೂ ಅವರ ಪುತ್ರ ವಾಹಿಸ್ಟ್ ಮೃತದೇಹ ಸಮೀಪದಲ್ಲೇ ನಿಲ್ಲಿಸಿದ್ದ ಕಾರಿನಲ್ಲಿ ಪತ್ತೆಯಾಗಿದೆ. ದೇಹಗಳ ಮೇಲೆ ಯಾವುದೇ ಗಾಯದ ಗುರುತು ಕಂಡು ಬಂದಿಲ್ಲ. ಮೇಲ್ನೋಟಕ್ಕೆ ಹಣಕಾಸಿನ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದಾಗಿದೆ ಎಂಬುದು ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ ಬೆರೆಸಿದ ಕೇಕ್ ಹಾಗೂ ಲಘು ಪಾನೀಯಗಳು ಸ್ಥಳದಲ್ಲಿ ಕಂಡು ಬಂದಿದೆ. ಹಾಗೂ ಮೃತಪಟ್ಟವರ ಬಾಯಿಯಲ್ಲಿ ನೊರೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News