ಉತ್ತರಪ್ರದೇಶ: ಹೆಲಿಕಾಪ್ಟರ್‍ನಲ್ಲಿ ಬಂದಿಳಿದ ರಾಮ-ಸೀತೆ!

Update: 2017-10-18 17:56 GMT

ಹೊಸದಿಲ್ಲಿ, ಅ.18: ಅಯೋಧ್ಯೆಯಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭ ವಿಶೇಷ ಆಕರ್ಷಣೆಯಾಗಿ ಜನರ ಗಮನಸೆಳೆದದ್ದು ರಾಮ, ಸೀತೆ ಹಾಗು ಲಕ್ಷ್ಮಣ ವೇಷಧಾರಿಗಳು. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಸಮ್ಮುಖದಲ್ಲಿ  ನಡೆದ ದೀಪಾವಳಿ ಆಚರಣೆಯ ಸಂದರ್ಭ ಈ ಮೂವರು ವೇಷಧಾರಿಗಳು ಹೆಲಿಕಾಪ್ಟರ್ ನಲ್ಲಿ ಬಂದಿಳಿದರು.

ರಾಮ, ಸೀತೆ ಹಾಗು ಲಕ್ಷ್ಮಣರ ವೇಷ ಧರಿಸಿದ್ದ ಕಲಾವಿದರು, ರಾಮಕಥಾ ಪಾರ್ಕ್‍ನಲ್ಲಿ ಹೆಲಿಕಾಪ್ಟರ್‍ನಿಂದ ಬಂದಿಳಿದರು. ಇವರನ್ನು ಸ್ವಾಗತಿಸಿದ ಮುಖ್ಯಮಂತ್ರಿ ಆದಿತ್ಯನಾಥ್, ರಾಮ ವೇಷಧಾರಿಗೆ ಸಾಂಕೇತಿಕ ಪಟ್ಟಾಭಿಷೇಕ ಮಾಡಿದರು. ಇದೇ ಸಂದರ್ಭ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಟಿ ನಡೆಯಿತು.

ಉತ್ತರ ಪ್ರದೇಶದ ಪ್ರವಾಸೋದ್ಯಮ ಇಲಾಖೆಯು ಅವಧ್ ವಿಶ್ವವಿದ್ಯಾನಿಲಯ ಹಾಗೂ ಜಿಲ್ಲಾಡಳಿತದ ಸಹಾಯದೊಂದಿಗೆ 1.71 ಲಕ್ಷ ದೀಪಗಳನ್ನು ಬೆಳಗಿಸಿ ವಿಶ್ವದಾಖಲೆ ನಿರ್ಮಿಸಲು ಸಜ್ಜಾಗಿದೆ. ರಾಮ್ ಕಿ ಪೈಡಿಯಲ್ಲಿ ಸರಯೂ ಘಾಟ್ ಮೆಟ್ಟಲಲ್ಲಿ ದೀಪ ಬೆಳಗಿಸಲು ಉದ್ದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News