ಮೇಘಾಲಯದಲ್ಲಿ ಗೋಮಾಂಸ ನಿಷೇಧವಿಲ್ಲ: ಬಿಜೆಪಿ ಸ್ಪಷ್ಟನೆ
Update: 2017-10-20 22:16 IST
ಶಿಲಾಂಗ್, ಅ.20: ಮೇಘಾಲಯದಲ್ಲಿ ಗೋಮಾಂಸ ನಿಷೇಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಬಿಜೆಪಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಈ ರೀತಿಯ ಸುಳ್ಳು ಸುದ್ದಿ ಹಬ್ಬುತ್ತಿದೆ ಎಂದು ಆರೋಪಿಸಿದೆ.
ಕೇಂದ್ರ ಸರಕಾರ ಮೇಘಾಲಯದಲ್ಲಿ ಗೋಮಾಂಸ ನಿಷೇಧಿಸಿಲ್ಲ ಎಂದಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಶಿಬುನ್ ಲಿಂಗ್ಡೊ, ಮೇ 23ರಂದು ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕಸಾಯಿಖಾನೆ ಯಾವ ರೀತಿ ಕಾರ್ಯನಿರ್ವಹಿಸಬೇಕು ಹಾಗೂ ಇಲ್ಲಿಗೆ ಯಾವ ರೀತಿ ಪ್ರಾಣಿಗಳನ್ನು ತರಬೇಕು ಎಂಬ ವಿಷಯದ ಕುರಿತು ಮಾಹಿತಿ ನೀಡಲಾಗಿದೆ. ಇದರಲ್ಲಿ ಗೋಮಾಂಸ ನಿಷೇಧದ ಬಗ್ಗೆ ಉಲ್ಲೇಖವಿಲ್ಲ ಎಂದು ತಿಳಿಸಿದರು.