×
Ad

ಇಂದೋರ್: ಸಾಂಪ್ರದಾಯಿಕ ಹಿಂಗೋಟ್ ಕಾಳಗದಲ್ಲಿ 36 ಜನರಿಗೆ ಗಾಯ

Update: 2017-10-21 18:47 IST

ಇಂದೋರ್,ಅ.21: ಇಲ್ಲಿಗೆ ಸಮೀಪದ ಗೌತಮಪುರ ಪಟ್ಟಣದಲ್ಲಿ ಕಳೆದ ರಾತ್ರಿ ವಾರ್ಷಿಕ ಹಿಂಗೋಟ್ ಉತ್ಸವದ ವೇಳೆ ಉರಿಯುತ್ತಿದ್ದ ಹಿಂಗೋಟ್(ಗನ್‌ಪೌಡರ್ ತುಂಬಿದ ಪೊಳ್ಳು ಹಣ್ಣು)ಗಳಿಂದ ಪರಸ್ಪರ ಹೊಡೆದಾಡಿದ 36 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದರು.

ಮೂವರಿಗೆ ತೀವ್ರ ಸುಟ್ಟಗಾಯಗಳಾಗಿದ್ದು, ಅವರನ್ನು ಸರಕಾರಿ ಮಹಾರಾಜಾ ಯಶವಂತರಾವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರಿಗೆ ಹೊರರೋಗಿಗಳನ್ನಾಗಿ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ.

ಹಿಂಗೋಟ್ ಕಾಳಗವು ಗೌತಮಪುರ ನಿವಾಸಿಗಳು ವರ್ಷಗಳಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದ್ದು, ದೀಪಾವಳಿಯ ಮರುದಿನ ನಡೆಯುತ್ತದೆ. ಈ ಕಾಳಗದಲ್ಲಿ ಜನರನ್ನು ಗೌತಮಪುರದ ತುರಾ ಮತ್ತು ರುಂಗಿ ಗ್ರಾಮದ ಕಲ್ಗಿ ಎಂದು ಎರಡು ತಂಡಗಳನ್ನಾಗಿ ಮಾಡಲಾಗುತ್ತಿದ್ದು, ಅವರು ಉರಿಯುತ್ತಿರುವ ಹಿಂಗೋಟ್ ಗಳಿಂದ ಪರಸ್ಪರ ಹೊಡೆದಾಡುತ್ತಾರೆ.

ಹಿಂಗೋಟ್ ಒಂದು ಕಾಡುಹಣ್ಣು ಆಗಿದ್ದು, ಅದರೊಳಗಿನ ತಿರುಳನ್ನು ತೆಗೆದು ಗನ್‌ಪೌಡರ್, ಕಲ್ಲಿದ್ದಲು ಮತ್ತು ಗಂಧಕವನ್ನು ತುಂಬಲಾಗುತ್ತದೆ. ಉತ್ಸವದ ವೇಳೆ ಎದುರಾಳಿ ಗುಂಪುಗಳು ಉರಿಯುತ್ತಿರುವ ಕ್ಷಿಪಣಿಯಂತೆ ಇವುಗಳನ್ನು ಪರಸ್ಪರರತ್ತ ಎಸೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News