×
Ad

ಮುಝಫ್ಫರ್‌ನಗರ: ಪಟಾಕಿ ವಿಷಯದಲ್ಲಿ ಘರ್ಷಣೆ, ಹಲವರಿಗೆ ಗಾಯ

Update: 2017-10-21 19:31 IST

ಮುಝಫ್ಫರ್‌ನಗರ(ಉ.ಪ್ರ.),ಅ.21: ಮುಝಫ್ಫರ್‌ನಗರ ಜಿಲ್ಲೆಯ ಚರ್ತಾವಾಲ್ ಪಟ್ಟಣದಲ್ಲಿ ಪಟಾಕಿಗಳನ್ನು ಸಿಡಿಸುವ ವಿಷಯದಲ್ಲಿ ಘರ್ಷಣೆಗಳು ನಡೆದು ದಲಿತ ಸಮುದಾಯಕ್ಕೆ ಸೇರಿದ ಹಲವರು ಗಾಯಗೊಂಡಿದ್ದಾರೆ. ಒಂದು ಗುಂಪು ಪಟಾಕಿಗಳನ್ನು ಸಿಡಿಸಲು ಮುಂದಾದಾಗ ದಲಿತ ಯುವಕರ ಇನ್ನೊಂದು ಗುಂಪು ವಿರೋಧಿಸಿದ್ದರಿಂದ ಆರಂಭಗೊಂಡ ವಿವಾದ, ಬಳಿಕ ಘರ್ಷಣೆಗೆ ತಿರುಗಿತ್ತು.

ಇಬ್ಬರನ್ನು ಬಂಧಿಸಲಾಗಿದ್ದು, 30 ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳ ಲಾಗಿದೆ. ಪಟ್ಟಣದಲ್ಲಿ ಬಂದೋಬಸ್ತ್‌ನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಕಿರ್ತಿ ಗ್ರಾಮದಲ್ಲಿ ಪಟಾಕಿ ಸಿಡಿಸುವ ವಿವಾದದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದು, ಆರು ಜನರು ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News