ಏಷ್ಯಾಕಪ್ ಹಾಕಿ: ಭಾರತ ಫೈನಲ್ ಗೆ
Update: 2017-10-21 20:30 IST
ಢಾಕಾ, ಅ.21: ಏಷ್ಯಾಕಪ್ ಹಾಕಿ ಸೂಪರ್ -4 ಹಂತದ ಮೂರನೆ ಹಾಗೂ ಅಂತಿಮ ಪಂದ್ಯದಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ 4-0 ಅಂತರದಲ್ಲಿ ಬಗ್ಗು ಬಡಿದು ಫೈನಲ್ ತಲುಪಿದೆ.
ಸತ್ಬೀರ್ ಸಿಂಗ್ (39ನೆ ನಿ.), ಹರ್ಮನ್ ಪ್ರೀತ್ ಸಿಂಗ್ (51ನೆ ನಿ.), ಲಲಿತ್ ಉಪಾಧ್ಯಾಯ (52ನೆ ನಿ.) ಮತ್ತು ಗುರ್ಜಂತ್ ಸಿಂಗ್ (57ನೆ ನಿಮಿಷ) ತಲಾ 1 ಗೋಲು ದಾಖಲಿಸಿ ಭಾರತದ ಭರ್ಜರಿ ಗೆಲುವಿಗೆ ನೆರವಾದರು.
ಇದರೊಂದಿಗೆ ಭಾರತ ಅಗ್ರಸ್ಥಾನದೊಂದಿಗೆ ಅಜೇಯವಾಗಿ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ರವಿವಾರ ನಡೆಯಲಿದೆ.
ಸೂಪರ್ -4 ಹಂತದ ಮೊದಲ ಪಂದ್ಯದಲ್ಲಿ 1-1 ಡ್ರಾ ಸಾಧಿಸಿದ್ದ ಭಾರತ ಎರಡನೆ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 6-2 ಅಂತರದಲ್ಲಿ ಜಯ ಗಳಿಸಿತ್ತು.