×
Ad

ಡೆನ್ಮಾರ್ಕ್ ಓಪನ್: ಶ್ರೀಕಾಂತ್ ಫೈನಲ್‌ಗೆ

Update: 2017-10-21 22:01 IST

ಒಡೆನ್ಸೆ, ಅ.21: ಭಾರತದ ಕೆ.ಶ್ರೀಕಾಂತ್ ಅವರು  ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್‌ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಫೈನಲ್ ತಲುಪಿದ್ದಾರೆ.

ಒಡೆನ್ಸಾ ಸ್ಫೋರ್ಟ್ಸ್ ಪಾರ್ಕ್‌ನಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಹಾಂಕಾಂಗ್‌ನ ವಾಂಗ್ ವಿಂಗ್ ಕೀ ವಿನ್ಸೆಂಟ್ ವಿರುದ್ಧ 21-18, 21-17 ಅಂತರದಲ್ಲಿ ಜಯ ಸಾಧಿಸಿ ಪ್ರಶಸ್ತಿಯ ಸುತ್ತು ತಲುಪಿದರು.

 ಇಂಡೋನೇಷ್ಯಾ ಓಪನ್ ಮತ್ತು ಆಸ್ಟ್ರೇಲಿಯನ್ ಓಪನ್ ಜಯಿಸಿರುವ 25ರ ಶ್ರೀಕಾಂತ್ ಇನ್ನೊಂದು ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News