ಮೋದಿ ಸರಕಾರ ಯುಪಿಎಕ್ಕಿಂತ ಭಿನ್ನವಲ್ಲ: ಆರೆಸ್ಸೆಸ್ ಅಂಗಸಂಸ್ಥೆ

Update: 2017-10-21 17:13 GMT

ಹೊಸದಿಲ್ಲಿ, ಅ. 21: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಹಿಂದಿನ ಯುಪಿಎ ಸರಕಾರದ ನೀತಿ ನಿರೂಪಣೆ ಪ್ರಕ್ರಿಯೆಯನ್ನೇ ಮುಂದುವರಿಸುತ್ತಿದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗಿದೆ, ಆರ್ಥಿಕತೆ ಕುಸಿಯುತ್ತಿದೆ ಎಂದು ಆರೆಸ್ಸೆಸ್ ಅಂಗಸಂಸ್ಥೆ

ಬಿಎಂಎಸ್ ಶನಿವಾರ ಹೇಳಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿ ವಿರುದ್ಧ ಧ್ವನಿ ಎತ್ತಿರುವ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್), ಈ ನೀತಿಯಿಂದ ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ, ದೇಶಿ ಉತ್ಪಾದನೆಗೆ ಉತ್ತೇಜನವೂ ಸಿಗುತ್ತಿಲ್ಲ ಎಂದಿದೆ. ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ನವೆಂಬರ್ 17ರಂದು ಸಂಸತ್ತಿಗೆ ರ್ಯಾಲಿಯನ್ನು ಸಂಘಟನೆ ಆಯೋಜಿಸಿದೆ. ಯುಪಿಎ ಅಧಿಕಾರದ ಅವಧಿಯಂತೆ ಬಿಜೆಪಿ ಅಧಿಕಾರದ ಅವಧಿಯ ನೀತಿ ನಿರೂಪಣೆಯಲ್ಲೂ ಸಾಮಾನ್ಯ ಮನುಷ್ಯ ಗೈರಾಗಿದ್ದಾನೆ ಎಂದು ಬಿಎಂಎಸ್‌ನ ಅಧ್ಯಕ್ಷ ಸಾಜಿ ನಾರಾಯಣನ್ ಹೇಳಿದ್ದಾರೆ.

ಸಾರ್ವಜನಿಕರ ಅಸಮಾಧಾನದ ಕಾರಣಕ್ಕೆ ನಿರ್ದಿಷ್ಟ ಸುಧಾರಣೆಗಳನ್ನು ಯುಪಿಎ ಸರಕಾರ ಕಸದ ಬುಟ್ಟಿಗೆ ಎಸೆದಿತ್ತು. ಮೋದಿ ಸರಕಾರ ಅದನ್ನು ಹೆಕ್ಕಿಕೊಂಡು ತನ್ನದೇ ಸುಧಾರಣೆ ಎಂದು ಹೇಳುತ್ತಿದೆ. ಯುಪಿಎ ಸರಕಾರದ ಸುಧಾರಣೆಯನ್ನೇ ಈಗಿನ ಎನ್‌ಡಿಎ ಸರಕಾರ ಮುಂದುವರಿಸಿದೆ. ಆರ್ಥಿಕತೆ ಹಾಗೂ ಕಾರ್ಮಿಕರ ಸುಧಾರಣೆಗೆ ಸಂಬಂಧಿಸಿ ಈ ಸರಕಾರ ಯುಪಿಎ 3ನೇ ಸರಕಾರಕ್ಕಿಂತ ಭಿನ್ನವಾಗಿ ಏನೂ ಇಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಸರಕಾರದ ಆರ್ಥಿಕ ನೀತಿ ಬಗ್ಗೆ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅವರ ಟೀಕೆಯನ್ನು ನಿರಾಕರಿಸಿದ್ದಾರೆ. ಎನ್‌ಡಿಎಯ ಸ್ವದೇಶಿ ಆರ್ಥಿಕತೆಯನ್ನು ಎಲ್‌ಪಿಜಿ (ಉದಾರೀಕರಣ, ಖಾಸಗೀಕರಣ, ಜಾಗತೀಕರಣ) ಕ್ಯಾಂಪ್‌ಗೆ ಹೈಜಾಕ್ ಮಾಡಿದ ಹಿರಿಮೆ ಹಿರಿಯ ಬಿಜೆಪಿ ನಾಯಕರಿಗೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News