ಭಾರತೀಯ ಸೇನೆ ವಿಶ್ವದ ಬಲಿಷ್ಠ ಸೇನೆಗಳಲ್ಲಿ ಒಂದು : ಬಿಪಿನ್ ರಾವತ್

Update: 2017-10-23 15:14 GMT

ಹರಿದ್ವಾರ್, ಅ.23: ವಿಶ್ವದ ಅತ್ಯಂತ ಬಲಿಷ್ಠ ಸೇನೆಗಳಲ್ಲಿ ಒಂದೆಂಬ ಹೆಗ್ಗಳಿಕೆಗೆ ಭಾರತೀಯ ಸೇನಾಪಡೆ ಪಾತ್ರವಾಗಿದ್ದು ಇದಕ್ಕೆ 3 ಕುಮಾಂವ್ ರೈಫಲ್ಸ್ ಪಡೆಯಲ್ಲಿರುವಂತಹ ಸಮರ್ಪಣಾ ಭಾವದ ಯೋಧರು ಹಾಗೂ ಬೆಟಾಲಿಯನ್ ಕಾರಣ ಎಂದು ಸೇನಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

 ಶತಮಾನೋತ್ಸವ ಆಚರಣೆಯ ಸಂಭ್ರಮದಲ್ಲಿರುವ 3 ಕುಮಾಂವ್ ರೈಫಲ್ಸ್ ಪಡೆ ಹಮ್ಮಿಕೊಂಡಿದ್ದ ಯೋಧರಿಗೆ, ನಿವೃತ್ತ ಯೋಧರಿಗೆ ಗೌರವಾರ್ಪಣೆ ಅರ್ಪಿಸುವ ಹಾಗೂ ಕರ್ತವ್ಯ ಸಂದರ್ಭ ಹುತಾತ್ಮರಾದ ವೀರಯೋಧರ ಪತ್ನಿಯರಿಗೆ ಗೌರವ ಸಮರ್ಪಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭ ಹೊರತರಲಾದ ಅಂಚೆಚೀಟಿಯನ್ನು ಅವರು ಬಿಡುಗಡೆಗೊಳಿಸಿದರು.

 ಪ್ರಥಮ ವಿಶ್ವಯುದ್ಧದಿಂದ ಸ್ವಾತಂತ್ರ್ಯೋತ್ತರ ಕಾಲದವರೆಗೆ 3 ಕುಮಾಂವ್ ರೈಫಲ್ಸ್ ಪಡೆಯ ಯೋಧರು ಸಮರ್ಪಣಾ ಭಾವದಿಂದ ಕರ್ತವ್ಯನಿಷ್ಠೆ ಮೆರೆದವರು. ದೇಶದ ಗಡಿಯನ್ನು ಕಾಯುವಲ್ಲಿ ಈ ಯೋಧರು ತೋರಿದ ಧೈರ್ಯ, ಸಾಹಸ, ತ್ಯಾಗ ಸ್ಮರಣಾರ್ಹ ಎಂದು ರಾವತ್ ಶ್ಲಾಘಿಸಿದರು. ನಿವೃತ್ತ ಯೋಧರು ಪಿಂಚಣಿ ಇನ್ನಿತರ ಸೌಲಭ್ಯಗಳನ್ನು ಯಾವುದೇ ವಿಳಂಬವಿಲ್ಲದೆ ಸರಿಯಾಗಿ ಪಡೆಯಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇದೇ ಸಂದರ್ಭ 3 ಕಮಾಂವ್ ರೈಫಲ್ಸ್ ಪಡೆಯವರು ಕವಾಯತು ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News