ದಿನೇಶ್ವರ್ ಶರ್ಮಾ ನೇತೃತ್ವದಲ್ಲಿ ಜಮ್ಮು-ಕಾಶ್ಮೀರದ ಬಗ್ಗೆ ಸುಸ್ಥಿರ ಮಾತುಕತೆ: ರಾಜ್‌ನಾಥ್ ಸಿಂಗ್

Update: 2017-10-23 16:54 GMT

ಹೊಸದಿಲ್ಲಿ, ಆ. 21: ಜಮ್ಮು ಹಾಗೂ ಕಾಶ್ಮೀರದ ಬಗ್ಗೆ ಸುಸ್ಥಿರ ಮಾತುಕತೆ ಆರಂಭಿಸಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

 ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾತನಾಡಿ, ಬುಲೆಟ್‌ನಿಂದಾಗಲಿ, ನಿಂದನೆಯಿಂದಾಗಲಿ ಜಮ್ಮು ಹಾಗೂ ಕಾಶ್ಮೀರದ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಆದರೆ, ಜನರನ್ನು ಪ್ರೀತಿಸುವ ಮೂಲಕ ಪರಿಹರಿಸಬಹುದು ಎಂದು ಹೇಳಿದ್ದಾರೆ ಎಂದು ಹೊಸದಿಲ್ಲಿಯಲ್ಲಿ ರಾಜ್‌ನಾಥ್ ಸಿಂಗ್ ತಿಳಿಸಿದರು.

ಮಾತುಕತೆ ಸಂದರ್ಭ ಭಾರತ ಸರಕಾರದ ಪ್ರತಿನಿಧಿಯಾಗಿ ಮಾಜಿ ಐಬಿ ನಿರ್ದೇಶಕ ದಿನೇಶ್ವರ್ ಶರ್ಮಾ ಉಪಸ್ಥಿತರಿರುವರು. ಸಂಪುಟ ಕಾರ್ಯದರ್ಶಿ ಶ್ರೇಣಿಗೆ ಸಮಾನರಾದ ಶರ್ಮಾ ಅವರು ಜಮ್ಮು ಹಾಗೂ ಕಾಶ್ಮೀರದ ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಹಾಗೂ ಜನರೊಂದಿಗೆ ಮಾತುಕತೆ ನಡೆಸಲಿರುವರು ಎಂದು ಗೃಹ ಸಚಿವರು ತಿಳಿಸಿದ್ದಾರೆ.

 ಭಾರತೀಯ ಪೊಲೀಸ್ ಸೇವೆಯ 1979ನೇ ಬ್ಯಾಚ್‌ನ ಅಧಿಕಾರಿಯಾಗಿರುವ ಶರ್ಮಾ 2014ರಿಂದ 2016ರ ವರೆಗೆ ಐಬಿಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಕೇಂದ್ರ ಸರಕಾರದ ಪ್ರತಿನಿಧಿಯಾಗಿ ಡಿ. ಶರ್ಮಾ ಕಣಿವೆಯ ನಿವಾಸಿಗಳ ಕಾನೂನು ಬದ್ಧ ಆಕಾಂಕ್ಷೆ ಅರ್ಥ ಮಾಡಿಕೊಳ್ಳಲು ಸುಸ್ಥಿರ ಸಂವಹನ ಹಾಗೂ ಮಾತುಕತೆ ಆರಂಭಿಸಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News