ನಟ ವಿಜಯ್ ವಿರುದ್ಧ ಮಧುರೈ ಪೊಲೀಸ್ ಠಾಣೆಯಲ್ಲಿ ದೂರು

Update: 2017-10-23 16:59 GMT

ಚೆನ್ನೈ, ಆ. 21: ಮೆರ್ಸಲ್ ಚಿತ್ರದ ಸಂಭಾಷಣೆ ಕುರಿತು ತಮಿಳು ನಟ ವಿಜಯ್ ವಿರುದ್ಧ ಮಧುರೈ ಮೂಲದ ವಕೀಲರೊಬ್ಬರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ವಿರುದ್ಧ ದೂರು ಸ್ವೀಕರಿಸಲಾಗಿದೆ. ಸ್ವೀಕೃತಿ ರಶೀದಿ ನೀಡಲಾಗಿದೆ. ಪ್ರಥಮ ಮಾಹಿತಿ ವರದಿ ದಾಖಲಿಸಿಲ್ಲ ಎಂದು ಮಧುರೈ ಅಣ್ಣಾ ನಗರ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಮೆರ್ಸಲ್ ಚಿತ್ರದಲ್ಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಡಿಜಿಟಲ್ ಇಂಡಿಯಾ ಕುರಿತ ನಿರ್ದಿಷ್ಟ ಸಂಭಾಷಣೆಗೆ ಕತ್ತರಿ ಹಾಕಬೇಕು ಎಂದು ಆಗ್ರಹಿಸಿ ಬಿಜೆಪಿಯ ತಮಿಳುನಾಡು ಘಟಕ ಆಗ್ರಹಿಸಿದ ಬಳಿಕ ವಿವಾದ ಉಂಟಾಗಿತ್ತು.

ಅಟ್ಲಿ ನಿರ್ದೇಶಿಸಿರುವ ಮೆರ್ಸಲ್ ಚಿತ್ರದಲ್ಲಿ ವಿಜಯ್ ಗ್ರಾಮ ಮುಖ್ಯಸ್ಥ, ವೈದ್ಯ ಹಾಗೂ ಜಾದೂಗಾರನ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಕಾಣುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News