ರಾಷ್ಟ್ರೀಯ ಕ್ರೀಡೆಗೆ ಪ್ರೋತ್ಸಾಹ ಸಿಗಲಿ

Update: 2017-10-23 18:50 GMT

ಮಾನ್ಯರೆ,

ಭಾರತದ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿ ಒಂದು ಕಾಲದಲ್ಲಿ ಜಗತ್ತಿನ ಕ್ರೀಡಾಭಿಮಾನಿಗಳಿಗೆ ಅತ್ಯಂತ ಜನಪ್ರಿಯವಾದ ಆಟವಾಗಿತ್ತು. ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತದ ಹಾಕಿ ತಂಡ ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿತ್ತು. ಒಂದೊಮ್ಮೆ ಒಲಿಂಪಿಕ್ಸ್‌ನಲ್ಲಿ ಸತತವಾಗಿ 6 ಬಾರಿ ಚಿನ್ನದ ಪದಕಗಳನ್ನು ಗೆಲ್ಲುವುದರೊಂದಿಗೆ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿತ್ತು.

ದಾಖಲೆಗಳ ಮೇಲೆ ದಾಖಲೆ ಬರೆದಿರುವ ಭಾರತದ ಹಾಕಿ ಕ್ರೀಡೆ ಇಂದು ಸೂಕ್ತವಾದ ಪ್ರೋತ್ಸಾಹ ಸಿಗದೆ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ಇತ್ತೀಚಿನ ಭಾರತೀಯರಲ್ಲಿ ಹೆಚ್ಚುತ್ತಿರುವ ಕ್ರಿಕೆಟ್ ಹುಚ್ಚು ಹಾಕಿ ಆಟವನ್ನು ಮರೆಯುವಂತೆ ಮಾಡುತ್ತಿದೆ. ಇಂತಹ ಅವಜ್ಞೆಯ ನಡುವೆಯೂ ಭಾರತದ ಹಾಕಿ ತಂಡ ಹತ್ತು ವರ್ಷಗಳ ನಂತರ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದು ಅತ್ಯಂತ ಸಂತಸದ ವಿಷಯ.

ಮುಂದಕ್ಕಾದರೂ ಕ್ರಿಕೆಟ್‌ಗೆ ನೀಡಿದಷ್ಟೇ ಸಲಹೆ, ಸಹಾಯ, ಸಹಕಾರ, ಪ್ರೋತ್ಸಾಹ ಹಾಕಿ ಕ್ರೀಡೆಗೂ ನೀಡಿ ಎಲ್ಲಾ ರೀತಿಯಿಂದಲೂ ಹಾಕಿಯನ್ನು ಇನ್ನಷ್ಟು ಬಲಪಡಿಸಬೇಕು.

-ಮೌಲಾಲಿ ಕೆ. ಬೋರಗಿ, ಸಿಂದಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News