×
Ad

ಪ್ರಧಾನಿ ಮೋದಿ- ಅಶ್ರಫ್ ಘನಿ ಮಾತುಕತೆ: ಭಯೋತ್ಪಾದನೆ ನಾಶಕ್ಕೆ ದೃಢ ನಿರ್ಧಾರ

Update: 2017-10-24 21:42 IST

ಹೊಸದಿಲ್ಲಿ, ಅ.24: ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರಲ್ಲದೆ ಭಯೋತ್ಪಾದಕತೆಯ ವಿಪತ್ತನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ದೃಢ ನಿರ್ಧಾರವನ್ನು ವ್ಯಕ್ತಪಡಿಸಿದರು.

ಅಫ್ಘಾನಿಸ್ತಾನದಲ್ಲಿ ಭದ್ರತೆ , ಶಾಂತಿ ಹಾಗೂ ಸ್ಥಿರತೆಯ ಸ್ಥಿತಿ ನೆಲೆಸಲು ಮತ್ತು ಸಮೃದ್ಧ ಅಫ್ಘಾನಿಸ್ತಾನವನ್ನು ರೂಪಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಭಯ ನಾಯಕರೂ ಚರ್ಚೆ ನಡೆಸಿದರು.

 ‘ನೆರೆಹೊರೆಯವರಿಗೆ ಪ್ರಥಮ ಪ್ರಾಶಸ್ತ್ಯ’ ಎಂಬ ನೀತಿಯನ್ನು ಮುಂದುವರಿಸಿರುವ ಕ್ರಮವಾಗಿ ಅಪಘಾನಿಸ್ತಾನದ ಅಧ್ಯಕ್ಷರನ್ನು ಹೊಸದಿಲ್ಲಿಯ ಹೈದರಾಬಾದ್ ಭವನದಲ್ಲಿ ಪ್ರಧಾನಿ ಮೋದಿ ಹಾರ್ದಿಕವಾಗಿ ಬರಮಾಡಿಕೊಂಡರು ಎಂದು ವಿದೇಶ ವ್ಯವಹಾರ ಇಲಾಖೆಯ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

 ಇದಕ್ಕೂ ಮೊದಲು ಅಫ್ಘಾನಿಸ್ತಾನದ ಅಧ್ಯಕ್ಷರು ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಹಾಗೂ ವಿದೇಶ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿ ಮಾಡಿದ್ದರು. ಎರಡೂ ದೇಶಗಳ ಮಧ್ಯೆ ವಿವಿಧ ರಾಜನೀತಿ ಸಹಭಾಗಿತ್ವದ ಅವಕಾಶದ ಬಗ್ಗೆ ಉಭಯ ಮುಖಂಡರೂ ಚರ್ಚೆ ನಡೆಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News