ಯೋಧರಿಂದ ಲೈಂಗಿಕ ಕಿರುಕುಳ ಆರೋಪ: ದಾಂತೇವಾಡಕ್ಕೆ ಎನ್ ಎಚ್ ಆರ್ ಸಿ
Update: 2017-10-24 23:41 IST
ರಾಯ್‌ಪುರ, ಅ. 24: ಕಳೆದ ಆಗಸ್ಟ್‌ನಲ್ಲಿ ರಾಖಿ ಕಟ್ಟಲು ಬಂದ ಶಾಲಾ ಬಾಲಕಿಯರಿಗೆ ಕೇಂದ್ರ ಮೀಸಲು ಪಡೆಯ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮೂರು ಸದಸ್ಯರ ತಂಡ ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಗೆ ತನಿಖೆ ಆರಂಭಿಸಲು ಮಂಗಳವಾರ ಆಗಮಿಸಿದೆ.