ವಿವಾದದ ಸುಳಿಯಲ್ಲಿ ಸಾಹೋ ಪೋಸ್ಟರ್

Update: 2017-10-27 17:28 GMT

ಬಾಹುಬಲಿ 2 ಬಳಿಕ ಪ್ರಭಾಸ್ ನಟಿಸಿರುವ ಸಾಹೋ ಚಿತ್ರದೆಡೆಗೆ ಈಗ ಟಾಲಿವುಡ್ ಮಂದಿಯ ಕಣ್ಣುನೆಟ್ಟಿದೆ. ತನ್ನ 38ನೆ ಜನ್ಮದಿನದಂದು ಸಾಹೋ ಚಿತ್ರದ ಲೇಟೆಸ್ಟ್ ಪೋಸ್ಟರ್ ಒಂದನ್ನು ಪ್ರಭಾಸ್ ತನ್ನ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅತ್ಯಂತ ಆಕರ್ಷಕವಾಗಿ ಮೂಡಿಬಂದಿರುವ ಪೋಸ್ಟರ್‌ನಲ್ಲಿ ಮುಖಕ್ಕೆ ಮುಸುಕು ಧರಿಸಿರುವ ಪ್ರಭಾಸ್ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಇಂಟರ್‌ನೆಟ್‌ನಲ್ಲಿ ಈ ಪೋಸ್ಟರ್ ಈಗ ಭರ್ಜರಿ ಪ್ರಚಾರ ಪಡೆದಿದೆ.

ಆದಾಗ್ಯೂ ಈ ಪೋಸ್ಟರ್ ಪ್ರಸಾರಗೊಂಡ ಕೆಲವೇ ತಾಸುಗಳೊಳಗೆ ವಿವಾದದ ಸುಳಿಗೆ ಸಿಲುಕಿಕೊಂಡಿದೆ. ಇತ್ತೀಚೆಗೆ ಬಿಡುಗಡೆಗೊಂಡ ಹಾಲಿವುಡ್ ಥ್ರಿಲ್ಲರ್ ‘ಬ್ಲೇಡ್‌ರನ್ನರ್ 2049’ ಚಿತ್ರದ ಪೋಸ್ಟರ್‌ನ್ನು ಸಾಹೋ ನಕಲು ಮಾಡಿದೆಯೆಂದು ಚಿತ್ರಪ್ರೇಮಿಗಳು ಟೀಕಿಸಿದ್ದಾರೆ. ಆದಾಗ್ಯೂ ಅದ್ಭುತವಾದ ಯಶಸ್ಸು ಕಂಡ ಬಾಹುಬಲಿ 1 ಮತ್ತು 2 ಚಿತ್ರಗಳನ್ನು ನೀಡಿರುವ ಪ್ರಭಾಸ್, ಸಾಹೋದಲ್ಲೂ ತಮ್ಮನ್ನು ನಿರಾಶೆಗೊಳಿಸಲಾರರೆಂದು ಅಭಿಮಾನಿಗಳು ಭರವಸೆ ಹೊಂದಿದ್ದಾರೆ.

 ಸಾಹೋ ಚಿತ್ರದ ಶೂಟಿಂಗ್ ಈಗಾಗಲೇ ಆರಂಭಗೊಂಡಿದ್ದು, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರೀಕರಣ ಗೊಳ್ಳುತ್ತಿದೆ.

 ಭಾರೀ ವೆಚ್ಚದಲ್ಲಿ ತಯಾರಾಗುತ್ತಿರುವ ಸಾಹೋಗೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ನಾಯಕಿ. ಅರುಣ್ ವಿಜಯ್, ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಚಂಕಿ ಪಾಂಡೆ, ಟೀನೂ ಆನಂದ್, ಮಹೇಶ್ ಮಂಜ್ರೇಕರ್ ಹಾಗೂ ಮಂದಿರಾ ಬೇಡಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರುಮೇನಿಯಾ ಹಾಗೂ ಅಬುಧಾಬಿಗಳಲ್ಲಿಯೂ ಸಾಹೋದ ಕೆಲವು ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ.

ಅದೇನಿದ್ದರೂ, ಸಾಹೋ ಬಿಡು ಗಡೆಗೆ ಮುಂದಿನ ವರ್ಷದವರೆಗೆ ಕಾಯಲೇಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News