ಮಾಲಿವುಡ್ ‘ವಿಲನ್’ಗೆ ಹನ್ಸಿಕಾ ನಾಯಕಿ

Update: 2017-10-27 17:35 GMT

ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಮಲಯಾಳಂ ಚಿತ್ರ ವಿಲನ್‌ಗೆ ನಾಯಕಿ ಯಾಗುವ ಅವಕಾಶ ದೊರೆತಿರುವುದು ಹನ್ಸಿಕಾ ಮೋಟ್ವಾನಿಗೆ ಎಲ್ಲಿಲ್ಲದ ಖುಷಿ ತಂದಿದೆಯಂತೆ. ನಿರ್ದೇಶಕ ಉನ್ನಿಕೃಷ್ಣನ್, ತನಗೆ ಚಿತ್ರದ ಸ್ಕ್ರಿಪ್ಟ್ ವಿವರಿಸುತ್ತಿದ್ದಾಗ ತಾನು ವಸ್ತುಶಃ ಸೀಟಿನ ತುದಿಯಲ್ಲಿ ಕುಳಿತುಕೊಳ್ಳುವಂತಾಯಿತು. ಹಿಂದೆ ಮುಂದೆ ನೋಡದೆ, ವಿಲನ್‌ನಲ್ಲಿ ನಟಿಸಲು ಒಪ್ಪಿಕೊಂಡೆ ಎಂದು ಹನ್ಸಿಕಾ ಹೇಳಿಕೊಂಡಿದ್ದಾಳೆ.

ತಮಿಳು, ತೆಲುಗಿನಲ್ಲಿ ಸಾಮಾನ್ಯವಾಗಿ ಬಬ್ಲಿ ಗರ್ಲ್ ಪಾತ್ರಗಳಲ್ಲಿಯೇ ಹೆಚ್ಚಾಗಿ ನಟಿಸಿರುವ ಹನ್ಸಿಕಾಗೆ ವಿಲನ್‌ನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿ ದ್ದಾರಂತೆ. ಇಲ್ಲಿ ತಾನು ವೈದ್ಯೆಯಾಗಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದ್ದರಾದರೂ, ಇತರ ವಿವರಗಳ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ವಿಲನ್ ಒಂದು ಥ್ರಿಲ್ಲರ್ ಚಿತ್ರವಾಗಿದ್ದು, ಇಲ್ಲಿ ಅಭಿನಯ ಪ್ರದರ್ಶನಕ್ಕೆ ಹೇರಳ ಅವಕಾಶಗಳಿವೆಯೆಂದು ಹನ್ಸಿಕಾ ಸಂತಸದಿಂದ ಹೇಳಿಕೊಂಡಿದ್ದಾರೆ.

ಮೋಹನ್‌ಲಾಲ್‌ರಂತಹ ಮಹಾನ್ ನಟನ ಜೊತೆ ನಟಿಸುತ್ತಿರುವುದು ತನಗೆ ಅಪಾರವಾದ ಹರ್ಷ ತಂದಿದೆ ಎನ್ನುವ ಹನ್ಸಿಕಾಗೆ ಈ ಚಿತ್ರವು ತನಗೆ ಸಿನೆಮಾರಂಗದಲ್ಲಿ ಹೊಸ ಬ್ರೇಕ್ ನೀಡಲಿದೆಯೆಂದು ಆತ್ಮವಿಶ್ವಾಸದೊಂದಿಗೆ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News