ವಾಟ್ಸ್ಯಾಪ್‌ನಲ್ಲಿ ಕಾಣಿಸಿಕೊಳ್ಳಲಿದೆ ಬಹುನಿರೀಕ್ಷಿತ ‘ಡಿಲಿಟ್ ಫಾರ್ ಎವರಿವನ್’ ಫೀಚರ್...

Update: 2017-10-28 05:59 GMT

ವಾಟ್ಸ್ಯಾಪ್‌ನಲ್ಲಿ ಮೆಸೇಜ್ ಡಿಲಿಟ್/ರೀಕಾಲ್ ಸೌಲಭ್ಯ ಲಭ್ಯವಾಗಲಿದೆ ಎಂಬ ವದಂತಿ ಸುಮಾರು ಒಂದು ವರ್ಷದಿಂದ ಹರಿದಾಡುತ್ತಲೇ ಇತ್ತು. ಇದೀಗ ಈ ಫೀಚರ್ ಅಧಿಕೃತವಾಗಿ ಬಿಡುಗಡೆಯಾಗಿರದಿದ್ದರೂ ಕೆಲವು ವಾಟ್ಸ್ಯಾಪ್‌ ಬಳಕೆದಾರರ ಆ್ಯಪ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ ಎನ್ನುವುದು ವಾಟ್ಸ್ಯಾಪ್‌ ಅಭಿಮಾನಿಗಳ ಪಾಲಿಗೆಗೆ ಖುಷಿಯ ವಿಷಯವಾಗಿದೆ. ‘ಡಿಲಿಟ್ ಫಾರ್ ಎವೆರಿವನ್’ ಎಂದು ಹೆಸರಿಸಲಾಗಿರುವ ಈ ನೂತನ ವೈಶಿಷ್ಟವನ್ನು ಆ್ಯಂಡ್ರಾಯ್ಡಾ, ಐಫೋನ್ ಮತ್ತು ವಿಂಡೋಸ್ ಪೋನ್ ಆ್ಯಪ್‌ಗಳ ಕೆಲವು ಬಳಕೆದಾರರಿಗೆ ಬಿಡುಗಡೆ ಮಾಡಲಾಗಿದೆ ಎಂದು ವಾಬಿಟಾಇನ್ಫೋ ವರದಿ ಮಾಡಿದೆ. ಸ್ವೀಕರಿಸುವ ವ್ಯಕ್ತಿ ಮತ್ತು ರವಾನಿಸುವ ವ್ಯಕ್ತಿ....ಇಬ್ಬರೂ ವಾಟ್ಸ್ಯಾಪ್‌ನ ಇತ್ತೀಚಿನ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರೆ ಮಾತ್ರ ಇದು ಕಾರ್ಯ ನಿರ್ವಹಿಸುತ್ತದೆ ಎಂದು ಅದು ತನ್ನ ಜಾಲತಾಣದಲ್ಲಿ ಹೇಳಿದೆ. ಅಂದ ಹಾಗೆ ಈ ನೂತನ ಫೀಚರ್ ವಾಟ್ಸ್ಯಾಪ್‌ನ ವೆಬ್ ವರ್ಷನ್‌ನಲ್ಲಿಯೂ ಕೆಲಸ ಮಾಡುತ್ತದೆ.

‘ಡಿಲಿಟ್ ಫಾರ್ ಎವೆರಿವನ್’ ಫೀಚರ್‌ನ್ನು ಬಳಸುವುದು ಹೇಗೆ?

 ಇದು ಅತ್ಯಂತ ಅಪೇಕ್ಷಿತ ಫೀಚರ್ ಎನ್ನಲಾಗಿದ್ದು, ವಾಟ್ಸಾಪ್ ಬಳಕೆದಾರರಿಗೆ ಕಾರ್ಯಗಳು ಇನ್ನಷ್ಟು ಸುಲಭವಾಗುವ ಸಾಧ್ಯತೆಯಿದೆ. ಹಲವಾರು ಬಳಕೆದಾರರು ಟ್ರಾಷ್ ಐಕಾನ್‌ನ್ನು ಒತ್ತಿದಾಗ ‘ಡಿಲಿಟ್ ಫಾರ್ ಎವೆರಿವನ್’ ಫೀಚರ್ ಕಾಣಿಸಿಕೊಳ್ಳು ತ್ತಿರುವುದನ್ನು ಗಮನಿಸಿದ್ದಾರೆ. ಬಳಕೆದಾರರು ತಮ್ಮ ಫೋನ್‌ನಲ್ಲಿಯ ಸಂದೇಶವನ್ನು ಮಾತ್ರ ಡಿಲಿಟ್ ಮಾಡಲು ಬಯಸಿದ್ದರೆ ‘ಡಿಲಿಟ್ ಫಾರ್ ಎವೆರಿವನ್’ ಪಕ್ಕದಲ್ಲಿ ‘ಡಿಲಿಟ್ ಫಾರ್ ಮಿ’ ಆಯ್ಕೆಯಿದೆ.

 ಈ ಫೀಚರ್‌ನ ಬಿಡುಗಡೆ ನಿಧಾನವಾಗಿ ಆಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗಬಹುದು ಎಂದು ವರದಿಯು ತಿಳಿಸಿದೆ. ಈಗಾಗಲೇ ಹೇಳಿರುವಂತೆ ಸ್ವೀಕರಿಸುವ ವ್ಯಕ್ತಿ ಮತ್ತು ರವಾನಿಸುವ ವ್ಯಕ್ತಿ ಇಬ್ಬರೂ ವಾಟ್ಸ್ಯಾಪ್‌ನ ಇತ್ತೀಚಿನ ಆವೃತ್ತಿಯನ್ನು ಅಳವಡಿಸಿಕೊಂಡಿದ್ದರೆ ಮಾತ್ರ ಈ ಫೀಚರ್ ಕೆಲಸ ಮಾಡುತ್ತದೆ. ಅದು ವಾಟ್ಸ್ಯಾಪ್‌ನ ಎಲ್ಲ ಟೆಕ್ಸ್ಟ್‌ಗಳು, ಚಿತ್ರಗಳು , ವೀಡಿಯೊಗಳು, ಜಿಐಎಫ್, ಧ್ವನಿ ಸಂದೇಶ, ಸಂಪರ್ಕ, ಫೈಲ್‌ಗಳು, ಲೊಕೇಷನ್, ಕೋಟೆಡ್ ಮೆಸೇಜ್ ಮತ್ತು ಸ್ಟೇಟಸ್ ರಿಪ್ಲೈಗಳಿಗಾಗಿ ಕಾರ್ಯ ಮಾಡುತ್ತದೆ ಎನ್ನಲಾಗಿದೆ.

ಈ ಫೀಚರ್ ಸಂದೇಶ ರವಾನಿಸಿದ ಏಳು ನಿಮಿಷಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆ ನಂತರ ಸಂದೇಶವನ್ನು ರೀಕಾಲ್ ಮಾಡಲು ಸಾಧ್ಯವಿಲ್ಲ. ಡಿಲಿಟ್ ಆದ ಸಂದೇಶಗಳ ಜಾಗದಲ್ಲಿ ‘ದಿಸ್ ಮೆಸೇಜ್ ವಾಸ್ ಡಿಲಿಟೆಡ್ ಫಾರ್ ಎವೆರಿವನ್’ ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ. ಆರಂಭಿಕ ವರದಿಯಂತೆ ರವಾನಿಸಲಾದ ಸಂದೇಶವು ಚಾಟ್ ಪೇಜ್ ಮತ್ತು ನೋಟಿಫಿಕೇಷನ್ ಪೇನ್‌ನಿಂದಲೂ ಅಳಿಸಿ ಹಾಕಲ್ಪಡುತ್ತದೆ. ಗೊತ್ತಿಲ್ಲದವರಿಗಾಗಿ, ರೀಕಾಲ್ ಫೀಚರ್ ಈಗಾಗಲೇ ಟೆಲಿಗ್ರಾಂ, ವೈಬರ್‌ನಂತಹ ಇತರ ಜನಪ್ರಿಯ ಆ್ಯಪ್‌ಗಳಲ್ಲಿ ಲಭ್ಯವಿದೆ ಮತ್ತು ವಾಟ್ಸಾಪ್ ಅಂತಿಮವಾಗಿ ತನ್ನ ಬಿಲಿಯಾಂತರ ದೈನಂದಿನ ಕ್ರಿಯಾಶೀಲ ಬಳಕೆದಾರರಿಗೆ ಅದನ್ನು ಲಭ್ಯವಾಗಿಸಲು ಮುಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News