×
Ad

ವ್ಯಾಪಾರ ಕೊರತೆಯಿದ್ದರೂ ಭಾರತದಿಂದ ಆಮದು ಕಡಿಮೆ ಮಾಡುವುದಿಲ್ಲ: ಅಮೆರಿಕ ಭರವಸೆ

Update: 2017-10-28 21:25 IST

ವಾಶಿಂಗ್ಟನ್, ಅ. 28: 29.6 ಬಿಲಿಯ ಡಾಲರ್ (ಸುಮಾರು 1,92,060 ಕೋಟಿ ರೂಪಾಯಿ) ವ್ಯಾಪಾರ ಕೊರತೆಯನ್ನು ನಿವಾರಿಸಲು ಅಥವಾ ಕಡಿಮೆ ಮಾಡಲು ಆಮದುಗಳನ್ನು ಕಡಿತ ಮಾಡುವುದಿಲ್ಲ ಎಂದು ಅಮೆರಿಕ ಶುಕ್ರವಾರ ಭಾರತಕ್ಕೆ ಭರವಸೆ ನೀಡಿದೆ.

ವಾಶಿಂಗ್ಟನ್‌ನಲ್ಲಿ ಶುಕ್ರವಾರ ನಡೆದ ಮೂರನೆ ಅಮೆರಿಕ-ಭಾರತ ವಾಣಿಜ್ಯ ಮಾತುಕತೆಯಲ್ಲಿ, ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರಿಗೆ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್ ರಾಸ್ ಈ ಭರವಸೆ ನೀಡಿದರು.

 ವ್ಯಾಪಾರ ಕೊರತೆ ಸಮಸ್ಯೆಯಾಗಿರುವುದು ನಿಜ ಎಂಬುದನ್ನು ಒಪ್ಪಿಕೊಂಡ ರಾಸ್, ಆದರೆ ಅದನ್ನು ಭಾರತದಿಂದ ಆಮದುಗಳನ್ನು ಕಡಿಮೆ ಮಾಡದೆ, ಆ ದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವ ಮೂಲಕ ಅಮೆರಿಕ ನಿಭಾಯಿಸುವುದು ಎಂದು ಹೇಳಿದರು.

ಈ ವಿಷಯವನ್ನು ಸುರೇಶ್ ಪ್ರಭು ಸುದ್ದಿಗಾರರಿಗೆ ತಿಳಿಸಿದರು.

ಇದೊಂದು ಧನಾತ್ಮಕ ಕಲ್ಪನೆಯಾಗಿದ್ದು, ಭಾರತ ಸ್ವಾಗತಿಸುತ್ತದೆ ಎಂದು ವಾಣಿಜ್ಯ ಸಚಿವರು ನುಡಿದರು. ‘‘ನಾವು ಅಮೆರಿಕದಿಂದ ಹೆಚ್ಚಿನದನ್ನು ಖರೀದಿಸಲು ಶಕ್ತರಾಗುತ್ತೇವೆ ಎನ್ನುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News