ಪಾಕಿಸ್ತಾನವನ್ನು ‘ಕಳವಳಕಾರಿ ದೇಶ’ ಎಂದು ಘೋಷಿಸಿ
Update: 2017-10-28 21:39 IST
ವಾಶಿಂಗ್ಟನ್, ಅ. 28: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಹಕ್ಕಿನ ಉಲ್ಲಂಘನೆಗೆ ಸಂಬಂಧಿಸಿ, ಆ ದೇಶವನ್ನು ‘ಕಳವಳ ಪಡಬೇಕಾದ ದೇಶ’ವೆಂದು ಘೋಷಿಸುವಂತೆ ಅಮೆರಿಕದ ಆರು ಪ್ರಭಾವಿ ಸೆನೆಟರ್‌ಗಳು ವಿದೇಶ ಕಾರ್ಯದರ್ಶಿ ರೆಕ್ಸ್ ಟಿಲರ್‌ಸನ್‌ರನ್ನು ಒತ್ತಾಯಿಸಿದ್ದಾರೆ. ಪಾಕಿಸ್ತಾನದ ತಾರತಮ್ಯಕಾರಿ ಕಾನೂನುಗಳು ಧರ್ಮದ ಆಧಾರದಲ್ಲಿ ಜನರಿಗೆ ಕಿರುಕುಳ ನೀಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಸೆನೆಟರ್‌ಗಳಾದ ಬಾಬ್ ಮೆನೆಂಡೇಝ್, ಮ್ಯಾಕ್ರೊ ರೂಬಿಯೊ, ಕ್ರಿಸ್ ಕೂನ್ಸ್, ಟಾಡ್ ಯಂಗ್, ಜೆಫ್ ಮರ್ಕ್‌ಲಿ ಮತ್ತು ಜೇಮ್ಸ್ ಲ್ಯಾಂಕ್‌ಫೋರ್ಡ್ ನವೆಂಬರ್ 13ರ ಗಡುವಿಗೆ ಮುನ್ನ ಟಿಲರ್‌ಸನ್‌ಗೆ ಪತ್ರವೊಂದನ್ನು ಬರೆದಿದ್ದಾರೆ.
ಯಾವ ದೇಶವನ್ನು ‘ಕಳವಳ ಪಡಬೇಕಾದ ದೇಶ’ ಎಂಬುದಾಗಿ ಘೋಷಿಸಬೇಕೆನ್ನುವುದನ್ನು ಈ ಗಡುವಿಗೆ ಮುನ್ನ ವಿದೇಶ ಇಲಾಖೆಯು ಸಂಸತ್ತು ಕಾಂಗ್ರೆಸ್‌ಗೆ ತಿಳಿಸಬೇಕಾಗಿದೆ.