×
Ad

ಕೆನಡಿ ಕಡತಗಳ ಬಿಡುಗಡೆಗೆ ಕ್ರಮ: ಟ್ರಂಪ್

Update: 2017-10-28 22:37 IST

ವಾಶಿಂಗ್ಟನ್, ಅ. 28: ‘ಎಲ್ಲ ರೀತಿಯ ಪಿತೂರಿ ಸಂಶಯಗಳಿಗೆ ಮುಕ್ತಾಯ ಹಾಡಲು’ ದಿವಂಗತ ಅಧ್ಯಕ್ಷ ಜಾನ್ ಎಫ್. ಕೆನಡಿಯ ಹತ್ಯೆಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಿಡುಗಡೆಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘‘ದಾಖಲೆಗಳಲ್ಲಿ ಪ್ರಸ್ತಾಪವಾಗಿರುವ ವ್ಯಕ್ತಿಗಳು ಈಗ ಜೀವಂತವಾಗಿದ್ದರೆ ಅವರ ಹೆಸರುಗಳು ಮತ್ತು ವಿಳಾಸಗಳನ್ನು ಮರೆ ಮಾಡಿ, ಹತ್ಯೆಗೆ ಸಂಬಂಧಿಸಿದ ಎಲ್ಲ ಕಡತಗಳ ಬಿಡುಗಡೆಗೆ ನಾನು ಕ್ರಮ ತೆಗೆದುಕೊಳ್ಳುತ್ತೇನೆ’’ ಎಂದು ಟ್ರಂಪ್ ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

ಈ ವಿಷಯದಲ್ಲಿ ತಾನು ಶ್ವೇತಭವನ ಸಿಬ್ಬಂದಿ ಮುಖ್ಯಸ್ಥ ಜಾನ್ ಕೆಲ್ಲಿ, ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ) ಮತ್ತು ಇತರ ಫೆಡರಲ್ ಸಂಸ್ಥೆಗಳೊಂದಿಗೆ ಸಮಾಲೋಚಿಸಿದ್ದೇನೆ ಎಂದು ಅವರು ನುಡಿದರು.

ಕೆನಡಿ ಹತ್ಯೆಗೆ ಸಂಬಂಧಿಸಿದ 2,800 ಕಡತಗಳು ಗುರುವಾರ ಬಿಡುಗಡೆಗೊಂಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News