ಅಶ್ರಫ್ ಪಾಕ್‌ನ ಮೊದಲ ಹ್ಯಾಟ್ರಿಕ್ ಹೀರೊ

Update: 2017-10-28 18:38 GMT

ಅಬುಧಾಬಿ, ಅ.28: ವೇಗದ ಬೌಲರ್ ಫಹೀಮ್ ಅಶ್ರಫ್ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಪಾಕಿಸ್ತಾನದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

 ಶ್ರೀಲಂಕಾ ವಿರುದ್ಧದ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ 3 ಓವರ್‌ಗಳಲ್ಲಿ 16 ರನ್‌ಗೆ 3 ವಿಕೆಟ್ ಪಡೆದರು. 19ನೆ ಓವರ್‌ನಲ್ಲಿ ಅವರು ಈ ದಾಖಲೆ ನಿರ್ಮಿಸಿದರು. 19ನೆ ಓವರ್‌ನ 4ನೆ ಎಸೆತದಲ್ಲಿ ಇಸ್ರೂ ಉದಾನೆ(6), 5ನೆ ಎಸೆತದಲ್ಲಿ ಮಹೇಲ ಉಡಾವಟ್ಟೆ (0) ಮತ್ತು 6ನೆ ಎಸೆತದಲ್ಲಿ ದಾಸನ್ ಶನಕಾ(1) ಅವರ ವಿಕೆಟ್ ಉಡಾಯಿಸುವ ಮೂಲಕ ಹ್ಯಾಟ್ರಿಕ್ ಗಳಿಸಿದರು.

 ಅಶ್ರಫ್ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ನಿರ್ಮಿಸಿರುವ ವಿಶ್ವದ 6ನೆ ಬೌಲರ್. 2007ರಲ್ಲಿ ಆಸ್ಟ್ರೇಲಿಯದ ಬ್ರೆಟ್ ಲೀ ಅವರು ಬಾಂಗ್ಲಾದೇಶ ತಂಡದ ವಿರುದ್ಧ ಕೇಪ್‌ಟೌನ್‌ನಲ್ಲಿ ಹ್ಯಾಟ್ರಿಕ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದ ವಿಶ್ವದ ಮೊದಲ ಬೌಲರ್ ಎನಿಸಿಕೊಂಡಿದ್ದರು. ನ್ಯೂಝಿಲೆಂಡ್‌ನ ಜಾಕೊಬ್ ಒರಾಮ್ ಮತ್ತು ಟಿಮ್ ಸೌಥಿ, ಲಂಕಾದ ತಿಸ್ಸರಾ ಪೆರೆರಾ ಮತ್ತು ಲಸಿತ್ ಮಾಲಿಂಗ ಈ ಹಿಂದೆ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಪಾಕಿಸ್ತಾನದ 23ರ ಹರೆಯದ ಆಲ್‌ರೌಂಡರ್ ಫಹೀಮ್ ಅಶ್ರಫ್ ಈ ವರೆಗೆ 3 ಟ್ವೆಂಟಿ 20 ಪಂದ್ಯಗಳನ್ನು ಆಡಿದ್ದಾರೆ. 6 ಓವರ್‌ಗಳಲ್ಲಿ 29 ರನ್‌ಗೆ 4 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News