ಸರಕಾರವು ಎಸ್‌ಸಿ/ಎಸ್‌ಟಿಗಳಿಗೆ ಶಿಕ್ಷಣ, ಪೌಷ್ಟಿಕಾಂಶಗಳನ್ನು ಖಚಿತ ಪಡಿಸಬೇಕು
Update: 2017-10-31 18:43 IST
ಹೊಸದಿಲ್ಲಿ,ಅ.31: ಸರಕಾರವು ಶಿಕ್ಷಣ, ಪೌಷ್ಟಿಕಾಂಶ ಮತ್ತು ಆರೋಗ್ಯ ರಕ್ಷಣೆ ಸೌಲಭ್ಯಗಳು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ವರ್ಗಗಳಿಗೆ ತಲುಪುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಅವರು ಮಂಗಳವಾರ ಇಲ್ಲಿ ಹೇಳಿದರು.
ಎಸ್‌ಸಿ/ಎಸ್‌ಟಿಗಳು ಮತ್ತು ಇತರ ಜಾತಿಗಳ ನಡುವೆ ತೀವ್ರ ಅಸಮಾನತೆಯಿದೆ ಎಂದು ಅವರು ಹೇಳಿದರು.
ನೈರ್ಮಲ್ಯವೂ ಪೌಷ್ಟಿಕತೆಯ ಸುಧಾರಣೆಯ ಮೇಲೆ ಪ್ರಮುಖ ಪರಿಣಾಮವನ್ನು ಬೀರುತ್ತದೆ ಎಂದರು.
ಆಯೋಗದ ವರದಿಯೊಂದನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದ ಅವರು ಎಸ್‌ಸಿ/ಎಸ್‌ಟಿಗಳಿಗೆ ಶಿಕ್ಷಣ, ಪೌಷ್ಟಿಕಾಂಶ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಭೌತಿಕ ಮೂಲಸೌಕರ್ಯಗಳ ಅಗತ್ಯಕ್ಕೂ ಒತ್ತು ನೀಡಿದರು.