ಹೊಸ ಅವತಾರದಲ್ಲಿ ಲಸಿತ್ ಮಾಲಿಂಗ

Update: 2017-11-01 09:41 GMT

ಕೊಲಂಬೊ, ನ.1: ವಿಶಿಷ್ಟ ಶೈಲಿಯ ಬೌಲಿಂಗ್ ಹಾಗೂ ಯಾರ್ಕರ್ ಎಸೆತದ ಮೂಲಕ ವಿಶ್ವ ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿರುವ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಈಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ದೇಶೀಯ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಆಫ್-ಸ್ಪಿನ್ ಬೌಲಿಂಗ್ ಮಾಡಿರುವ ಮಾಲಿಂಗ 4 ಓವರ್‌ಗಳಲ್ಲಿ ಕೇವಲ 24 ರನ್ ನೀಡಿ ಮೂರು ವಿಕೆಟ್‌ಗಳನ್ನು ಉಡಾಯಿಸಿದ್ದಾರೆ.

 ಎಂಸಿಎ ನಾಕೌಟ್ ಕ್ರಿಕೆಟ್ ಟೂರ್ನಮೆಂಟ್ ಫೈನಲ್‌ನಲ್ಲಿ ಟೀಜೈ ಲಂಕಾ ಪರ ಎಲ್‌ಬಿ ಫೈನಾನ್ಸ್ ತಂಡದ ವಿರುದ್ಧ ಆಡಿರುವ ಮಾಲಿಂಗ ಅವರು ಲಕ್ಷಣ್ ರೊಡ್ರಿಗೊ, ಚತುರಂಗ ಕುಮಾರ ಹಾಗೂ ಅನುಷ್ಕ್ ಪೆರೇರ ವಿಕೆಟ್‌ಗಳನ್ನು ಕಬಳಿಸಿದರು.

ಲಕ್ಷಣ್ ಅವರು ಮಾಲಿಂಗ ಎಸೆತವನ್ನು ಸ್ವೀಪ್ ಮಾಡುವ ಯತ್ನದಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿ ಔಟಾದರು. ಕುಮಾರ್ ವಿಕೆಟ್ ಮಾಲಿಂಗಗೆ ಸ್ಮರಣೀಯವಾಗಿದೆ. ಮಾಲಿಂಗ ಬಲಗೈ ಬ್ಯಾಟ್ಸ್‌ಮನ್ ಕುಮಾರ್‌ರನ್ನು ಸ್ಪಿನ್ ಬೌಲಿಂಗ್‌ನ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದಾರೆ.

 ಅನುಷ್ಕ್ ಪೆರೇರ ಅವರಿ ಮಾಲಿಂಗ ಎಸೆತವನ್ನು ಕೆಣಕಲು ಹೋಗಿ ಫೀಲ್ಡರ್‌ಗೆ ಕ್ಯಾಚ್ ನೀಡಿ ಔಟಾದರು.

ವೇಗದ ಬೌಲರ್ ಸ್ಪಿನ್ ಬೌಲರ್ ಆಗಿ ಪರಿವರ್ತನೆಯಾಗುವುದು ಇದೇ ಮೊದಲಲ್ಲ. ಮನೋಜ್ ಪ್ರಭಾಕರ್, ಗುರಿಂದರ್ ಸಂಧು, ಸೊಹೈಲ್ ತನ್ವೀರ್ ಹಾಗೂ ಕಾಲಿನ ಮಿಲ್ಲರ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News