ಜಾರ್ಖಂಡ್ ನಲ್ಲಿ ಎನ್‌ಕೌಂಟರ್: ನಾಲ್ವರು ಶಂಕಿತ ಮಾವೋವಾದಿಗಳ ಹತ್ಯೆ
Update: 2017-11-01 20:47 IST
ರಾಂಚಿ, ನ. 1: ಜಾರ್ಖಂಡ್‌ನ ಖುಟಿ ಜಿಲ್ಲೆಯಲ್ಲಿ ಭದ್ರತಾ ಪಡೆಯೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ನಿಷೇಧಿತ ಪಿಎಲ್‌ಎಫ್ ಸಂಘಟನೆಯ ಉನ್ನತ ಕಮಾಂಡರ್ ಸಹಿತ ನಾಲ್ವರು ಶಂಕಿತ ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ಬುಧವಾರ ಹೇಳಿದ್ದಾರೆ.
ಕಾರೊ ನದಿ ಸಮೀಪ ಮಂಗಳವಾರ ರಾತ್ರಿ ಗುಂಡಿನ ಚಕಮಕಿ ನಡೆಯಿತು. ಹತರಾದ ಎಲ್ಲ ಶಂಕಿತ ಮಾವೊವಾದಿಗಳು ಪೀಪಲ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ (ಪಿಎಲ್‌ಎಫ್‌ಏ)ಗೆ ಸೇರಿದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹತರಾದ ಶಂಕಿತ ಮಾವೋವಾದಿಗಳಲ್ಲಿ ಪಿಎಲ್ ಎಫ್‌ಐಯ ಮುಖ್ಯ ಕಮಾಂಡರ್ ವಿವೇಕ್ ಆಲಿಯಾಸ್ ಮೈನಾ ಗೋಪೆ ಕೂಡ ಸೇರಿದ್ದಾರೆ.ರಾಜ್ಯದ 24 ಜಿಲ್ಲೆಗಳಲ್ಲಿ 18ರಲ್ಲಿ ಮಾವೋವಾದಿಗಳು ಸಕ್ರಿಯರಾಗಿದ್ದಾರೆ.