×
Ad

ಐಎಎಫ್‌ಲ್ಲಿರುವ ಜಗತ್ತಿನ ಅತಿ ದೊಡ್ಡ ಹೆಲಿಕಾಪ್ಟರ್ ದುರಸ್ತಿ: ರಶ್ಯ-ಭಾರತ ಒಪ್ಪಂದಕ್ಕೆ ಶೀಘ್ರ ಸಹಿ

Update: 2017-11-01 23:54 IST

ಹೊಸದಿಲ್ಲಿ, ನ. 1: ಜಗತ್ತಿನ ಅತೀ ದೊಡ್ಡ ಹೆಲಿಕಾಪ್ಟರ್ ಆಗಿರುವ ಭಾರತೀಯ ವಾಯು ಪಡೆಯ ಎಂಐ-26 ಹೆಲಿಕಾಪ್ಟರ್‌ಗಳನ್ನು ಕೂಲಂಕುಷ ಪರೀಕ್ಷಿಸುವ ಗುತ್ತಿಗೆಗೆ ಭಾರತ ಹಾಗೂ ರಶ್ಯ ಶೀಘ್ರ ಸಹಿ ಹಾಕಲಿವೆ. ಎಂಐ ಹೆಲಿಕಾಪ್ಟರ್‌ಗಳನ್ನು ದೀರ್ಘಾವಧಿ ನಿರ್ವಹಿಸಲು ಕೂಡ ಮಾಸ್ಕೋ ಕೇಳಿಕೊಂಡಿದೆ ಎಂದು ರಶ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೂರು ಸಾಗಾಟ ಹೆಲಿಕಾಪ್ಟರ್‌ಗಳ ಪರೀಕ್ಷೆ ನಡೆಸಲು ಗುತ್ತಿಗೆಯ ಹಣಕಾಸಿನ ಆಯಾಮವನ್ನು ರೋಸ್ಟೆಕ್ ಸ್ಟೇಟ್ ಕಾರ್ಪೋರೇಶನ್‌ನ ರಶ್ಯನ್ ಹೆಲಿಕಾಪ್ಟರ್ಸ್‌ ಅಂತಿಮಗೊಳಿಸಿದೆ. ಪ್ರಸ್ತುತ ಗುತ್ತಿಗೆಯ ನಿರ್ದಿಷ್ಟ ತಾಂತ್ರಿಕ ವಿವರಗಳ ಬಗ್ಗೆ ಎರಡೂ ದೇಶಗಳು ಮಾತುಕತೆ ನಡೆಸುತ್ತಿವೆ.

 ಭಾರತೀಯ ವಾಯು ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎರಡು ಎಂಐ-35 ಹೆಲಿಕಪ್ಟಾರ್‌ಗಳ ಪರೀಕ್ಷೆ, ಐದು ಕೆಎ-31 ಹೆಲಿಕಾಪ್ಟರ್‌ಗಳ ದುರಸ್ಥಿ ಹಾಗೂ ಆಧುನಿಕೀಕರಣ ಹಾಗೂ ಎಂಐ-17 ಹೆಲಿಕಾಪ್ಟರ್‌ಗಳ ನಿರ್ವಹಣೆ ಹಾಗೂ ದುರಸ್ತಿಯ ದೀರ್ಘಾವಧಿ ಒಪ್ಪಂದಕ್ಕೂ ರಶ್ಯ ಆಹ್ವಾನ ನೀಡಿದೆ.

ಎಂಐ-17 ಮಾದರಿಯ ಹೆಲಿಕಪ್ಟಾರ್‌ಗಳ ನಿರ್ವಹಣೆ ಹಾಗೂ ದುರಸ್ತಿಯ ದೀರ್ಘಾವಧಿ ಒಪ್ಪಂದದ ಕರಡನ್ನು ಭಾರತದ ವಾಯು ಪಡೆಯ ಕೇಂದ್ರ ಕಚೇರಿಗೆ ಕಳುಹಿಸಿ ಕೊಡಲಾಗಿದೆ.

ಆ್ಯಂಡ್ರೆ ಬೋಗಿನ್‌ಸ್ಕಿ 

ರಶ್ಯನ್ ಹೆಲಿಕಾಪ್ಟರ್ಸ್‌ನ ಹೋಲ್ಡಿಂಗ್ ಕಂಪೆನಿಯ ಪ್ರಧಾನ ನಿರ್ದೇಶಕ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News