×
Ad

ಕಾಶ್ಮೀರ: ಬಿಜೆಪಿ ಯುವ ನಾಯಕನ ಕತ್ತು ಸೀಳಿ ಕೊಲೆ

Update: 2017-11-02 21:28 IST

ಕಾಶ್ಮೀರ, ನ.2: ಬಿಜೆಪಿಯ ಯುವ ನಾಯಕರೊಬ್ಬರನ್ನು ಕತ್ತು ಸೀಳಿ ಕೊಲೆಗೈದ ಘಟನೆ ದಕ್ಷಿಣ ಕಾಶ್ಮೀರದ ಶೊಪಿಯಾನ್ ನಲ್ಲಿ ನಡೆದಿದೆ. ಇದು ಭಯೋತ್ಪಾದಕರ ಕೃತ್ಯವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಕೊಲೆಗೈದ ಎರಡು ವಾರಗಳ ನಂತರ ಈ ಘಟನೆ ನಡೆದಿದೆ. ಮೃತಪಟ್ಟವರನ್ನು ಶೊಪಿಯಾನ್ ಜಿಲ್ಲಾಧ್ಯಕ್ಷ ನಾಯಕ ಗೌಹರ್ ಹುಸೈನ್ ಭಟ್ (30) ಎಂದು ಗುರುತಿಸಲಾಗಿದೆ.

“ಬಯಲುಪ್ರದೇಶವೊಂದರಲ್ಲಿ ಅವರ ಮೃತದೇಹ ಸಿಕ್ಕಿತ್ತು. ಇಂತಹ ಕೊಲೆಗಳು ಭಯೋತ್ಪಾದಕರ ಕೃತ್ಯವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News