ವಿಶ್ವದಲ್ಲೇ ಅತೀ ಎತ್ತರದಲ್ಲಿರುವ ರಸ್ತೆ ಲಡಾಕ್‌ನಲ್ಲಿ !

Update: 2017-11-02 16:37 GMT

ಶ್ರೀನಗರ, ನ. 2: ಜಮ್ಮು ಹಾಗೂ ಕಾಶ್ಮೀರದ ಲಡಾಕ್ ವಲಯದಲ್ಲಿ ಜಗತ್ತಿನ ಅತೀ ಎತ್ತರದಲ್ಲಿರುವ ಮೋಟಾರು ವಾಹನ ಸಂಚರಿಸುವ ರಸ್ತೆ ನಿರ್ಮಿಸುವ ಮೂಲಕ ಬಿಆರ್‌ಒ ಪ್ರಮುಖ ಸಾಧನೆ ಮಾಡಿದೆ.

ಉಮ್‌ಲಿಂಗಾ ತುದಿಯ ಮೂಲಕ ಹಾದು ಹೋಗುವ ಈ ರಸ್ತೆ 19,300 ಅಡಿ ಎತ್ತರದಲ್ಲಿದೆ. ಬಿಆರ್‌ಒನ ಪ್ರೊಜೆಕ್ಟ್ ಹಿಮಾಂಕ್ ನ ಅಡಿಯಲ್ಲಿ ಈ ಸಾಧನೆ ಮಾಡಲಾಗಿದೆ.

ಹಾನ್ಲೆಗೆ ಹತ್ತಿರದಲ್ಲಿರುವ ಈ 86 ಕಿ.ಮೀ. ಉದ್ದದ ರಸ್ತೆ ಲೇಹ್‌ನಿಂದ 230 ಕಿ.ಮೀ. ದೂರದಲ್ಲಿರುವ ಚಿಸುಮ್ಲೆ ಹಾಗೂ ಡೆಮ್‌ಚೋಕ್ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಪೂರ್ವ ವಲಯದಲ್ಲಿರುವ ಈ ಗ್ರಾಮಗಳು ಇಂಡೊ-ಚೀನಾ ಗಡಿಗೆ ಇದು ತುಂಬಾ ಸಮೀಪದಲ್ಲಿದೆ ಎಂದು ಬಿಆರ್‌ಒನ ವಕ್ತಾರ ತಿಳಿಸಿದ್ದಾರೆ.

 ಈ ಅತೀ ದೊಡ್ಡ ಯೋಜನೆಯನ್ನು ಪೂರ್ಣಗೊಳಿಸಿರುವುದಕ್ಕೆ ಬಿಆರ್‌ಒ ಸಿಬ್ಬಂದಿಯನ್ನು ಗೌರವಿಸಿರುವ ಹಿಮಾಂಕ್ ಯೋಜನೆಯ ಮುಖ್ಯ ಎಂಜಿನಿಯರ್ ಬ್ರಿಗೇಡರ್ ಡಿ.ಎಂ. ಪೂರ್ವಿಮಠ್, 19,300 ಅಡಿ ಎತ್ತರದಲ್ಲಿ ರಸ್ತೆ ನಿರ್ಮಿಸುವುದು ಜೀವಕ್ಕೆ ಸವಾಲೊಡ್ಡುವ ವಿಷಯ ಎಂದಿದ್ದಾರೆ.

ನಿರ್ಮಾಣ ಚಟುವಟಿಕೆ ನಡೆಸುವ ಸ್ಥಳದಲ್ಲಿ ಹವಾಮಾನ ಯಾವತ್ತೂ ಪ್ರಕ್ಷುಬ್ದವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News